ಇಂದೋರ್ ನ ಚಂದನ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಂತಕ ಪ್ರೇಮಿಯೊಬ್ಬನ ಹೇಯ ಕೃತ್ಯ ಬಯಲಾಗಿದೆ. ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯನ್ನು ಕೊಂದು ಮನೆಯಲ್ಲೇ ಹೂತು ಹಾಕಿ ಅದರ ಮೇಲೆ ಹಾಸಿಗೆ ಹಾಕಿಕೊಂಡು ಮಲಗುತ್ತಿದ್ದ.
ಘನಶ್ಯಾಮ್ ಹಾಗೂ ಕಾಜಲ್ ಪರಸ್ಪರ ಪ್ರೀತಿಸ್ತಾ ಇದ್ರು. ಯಾವುದೋ ಸಣ್ಣ ವಿಚಾರಕ್ಕೆ ಇಬ್ಬರ ಮಧ್ಯೆ ಶುರುವಾದ ಜಗಳ ತಾರಕಕ್ಕೇರಿತ್ತು. ಕೋಪದಲ್ಲಿ ಘನಶ್ಯಾಮ್, ಕಾಜಲ್ ತಲೆಗೆ ಗಟ್ಟಿಯಾದ ವಸ್ತುವಿನಿಂದ ಹೊಡೆದಿದ್ದ, ಆ ರಭಸಕ್ಕೆ ಕಾಜಲ್ ಕುಸಿದು ಬಿದ್ದು ಅಲ್ಲೇ ಮೃತಪಟ್ಟಿದ್ದಾಳೆ.
ಘನಶ್ಯಾಮ್ ಆಕೆಯ ಮೃತದೇಹವನ್ನು ಮನೆಯ ಕೋಣೆಯೊಳಗೆ ಹೂತು ಹಾಕಿದ್ದ. ಮೇಲಿಂದ ಟೈಲ್ಸ್ ಹಾಕಿ ಅನುಮಾನ ಬರದಂತೆ ಅದರ ಮೇಲೆಯೇ ಹಾಸಿಗೆ ಹಾಕಿಕೊಂಡು ಮಲಗುತ್ತಿದ್ದ. ಯಾವುದೋ ವಿಚಾರಕ್ಕೆ ಪಕ್ಕದ ಮನೆಯವನೊಂದಿಗೆ ಘನಶ್ಯಾಮ್ ಜಗಳಕ್ಕಿಳಿದಿದ್ದ. ಜೋರಾಗಿ ಕೂಗಾಡುತ್ತ ಕೊಲೆ ವಿಚಾರ ಬಾಯ್ಬಿಟ್ಟಿದ್ದ. ಪ್ರಿಯತಮೆ ಕಾಜಲ್ ಳನ್ನು ಕೊಂದು ಹೂತು ಹಾಕಿದಂತೆ ನಿನ್ನನ್ನೂ ಮುಗಿಸುತ್ತೇನೆ ಅಂತಾ ಆವಾಝ್ ಹಾಕಿದ್ದ. ಆಗ ಈತನ ನೀಚ ಕೃತ್ಯ ಬೆಳಕಿಗೆ ಬಂದಿದೆ.