‘ಸರ್ದಾರ್ ಗಬ್ಬರ್ ಸಿಂಗ್’ ಬಳಿಕ, ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತೆ ನಟಿಸುತ್ತಿರುವ ಬಹು ನಿರೀಕ್ಷೆಯ ಚಿತ್ರ ಮುಂದಿನ ವಾರ ಸೆಟ್ಟೇರಲಿದೆ.
ಪವನ್ ಕಲ್ಯಾಣ್ ಸಿನಿಮಾ ಜೊತೆಗೆ ರಾಜಕೀಯದಲ್ಲಿಯೂ ಆಸಕ್ತಿ ತೋರುತ್ತಿದ್ದು, ತಮ್ಮದೇ ಆದ ಸಂಘಟನೆ ಹೊಂದಿದ್ದಾರೆ. ಇದೀಗ ಪವನ್ ಕಲ್ಯಾಣ್ ಅಭಿನಯದ, ಕಿಶೋರ್ ಕುಮಾರ್ ನಿರ್ದೇಶನದ ‘ಕಾಟಮರಾಯುಡು’ ಚಿತ್ರೀಕರಣಕ್ಕೆ ಪೂರ್ವ ತಯಾರಿ ನಡೆದಿದೆ. ಮುಂದಿನ ವಾರ ಚಿತ್ರ ಸೆಟ್ಟೇರಲಿದ್ದು, ಮತ್ತೊಮ್ಮೆ ಪವನ್ ಕಲ್ಯಾಣ್ ಅವರಿಗೆ ಜೋಡಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಳ್ಳಲಿದ್ದಾರೆ.
ಅನುಪ್ ರುಬೆನ್ಸ್ ಸಂಗೀತ, ಅಕುಲ ಶಿವ ಚಿತ್ರಕತೆ ಇರುವ ‘ಕಾಟಮರಾಯುಡು’ ರಾಯಲಸೀಮೆ ಕಥಾ ಹಂದರ ಹೊಂದಿದ್ದು, ಪವರ್ ಸ್ಟಾರ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.