ಹುಬ್ಬಳ್ಳಿ: ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲಿಯೇ, ಇಲ್ಲವೇ, ಆಸ್ಪತ್ರೆ ಸಮೀಪದಲ್ಲಿ ಮಗುವಿಗೆ ಜನ್ಮ ನೀಡಿದ ಅನೇಕ ಪ್ರಕರಣಗಳು ವರದಿಯಾಗಿವೆ.
ಹೀಗೆ, ತುಂಬು ಗರ್ಭಿಣಿಯೊಬ್ಬರು ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯದಲ್ಲಿ ಆಟೋದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಹುಬ್ಬಳ್ಳಿಯ ಗುರುನಾಥ ಬಡಾವಣೆಯಲ್ಲಿ ನಡೆದಿದೆ. ಫರ್ವಿನಾಬಾನು ಎಂಬ ಮಹಿಳೆಗೆ ದಿನಗಳು ತುಂಬಿದ್ದು, ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಕುಟುಂಬದವರೊಂದಿಗೆ ಆಟೋದಲ್ಲಿ ಹಳೆ ಹುಬ್ಬಳ್ಳಿಯ ಪಾಲಿಕೆ ಆಸ್ಪತ್ರೆಗೆ ಹೊರಟಿದ್ದಾರೆ. ಈ ಸಂದರ್ಭದಲ್ಲಿ ಆಟೋದಲ್ಲಿಯೇ ಅವರಿಗೆ ಹೆಣ್ಣು ಮಗು ಜನಿಸಿದೆ ಎನ್ನಲಾಗಿದೆ.
ಅಲ್ಲಿಂದ ಕುಟುಂಬದವರು, ತಾಯಿ ಫರ್ವಿನಾಬಾನು ಹಾಗೂ ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದು, ಅವರನ್ನು ಪರೀಕ್ಷಿಸಿದ ವೈದ್ಯರು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.