ಪ್ರತಿ ಹದಿನೈದು ದಿನಗಳಿಗೊಮ್ಮೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೈಲ ದರವನ್ನು ಆಧರಿಸಿ ಭಾರತದಲ್ಲಿ ಪೆಟ್ರೋಲ್- ಡಿಸೇಲ್ ದರವನ್ನು ನಿಗದಿ ಮಾಡುವ ತೈಲ ಕಂಪನಿಗಳು, ಈಗ ಪೆಟ್ರೋಲ್ ದರವನ್ನು ಏರಿಕೆ ಮಾಡಿದ್ದರೆ, ಡಿಸೇಲ್ ದರದಲ್ಲಿ ಇಳಿಕೆಯಾಗಿದೆ.
ಪೆಟ್ರೋಲ್ ದರದಲ್ಲಿ 58 ಪೈಸೆಯಷ್ಟು ಏರಿಕೆಯಾಗಿದ್ದರೆ, ಡಿಸೇಲ್ ದರ 31 ಪೈಸೆಯಷ್ಟು ಇಳಿಕೆಯಾಗಿದೆ. ನೂತನ ದರ ಮಧ್ಯ ರಾತ್ರಿಯಿಂದಲೇ ಜಾರಿಗೆ ಬಂದಿದೆ. ನವದೆಹಲಿಯಲ್ಲಿ 63.47 ರೂ. ಇದ್ದ ಪೆಟ್ರೋಲ್ ದರ ಈಗ 64.05 ರೂ. ಗಳಿಗೆ ತಲುಪಿದೆ. ಅದೇ ರೀತಿ 52.94 ರೂ. ಇದ್ದ ಡಿಸೇಲ್ ದರ ಈಗ 52.63 ರೂ. ಗಳಾಗಿದೆ.
ಸೆಪ್ಟೆಂಬರ್ 1 ರಂದು ಪೆಟ್ರೋಲ್ ದರದಲ್ಲಿ ಬರೋಬ್ಬರಿ 3.38 ರೂ. ಏರಿಕೆಯಾಗಿದ್ದು, ಈಗ ಮತ್ತೊಮ್ಮೆ 58 ಪೈಸೆ ಏರಿಕೆಯಾಗುವ ಮೂಲಕ ವಾಹನ ಸವಾರರಿಗೆ ಶಾಕ್ ನೀಡಿದೆ. 15 ದಿನಗಳ ಹಿಂದೆ 2.67 ರೂ. ಏರಿಕೆ ಕಂಡಿದ್ದ ಡಿಸೇಲ್ ದರದಲ್ಲಿ ಈಗ 31 ಪೈಸೆಯಷ್ಟು ಅಲ್ಪ ಮಟ್ಟಿಗಿನ ಇಳಿಕೆಯಾಗಿದೆ.