ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಹೆಸರು ಪದೇ, ಪದೇ ಪ್ರಸ್ತಾಪವಾಗುತ್ತಿದೆ. ಇದೇ ಸಂದರ್ಭದಲ್ಲಿ ಜಯಲಲಿತಾ ಅವರ ಹಳೆಯ ಪೋಸ್ಟರ್ ಒಂದು ಜಾಲತಾಣದಲ್ಲಿ ಹರಿದಾಡುತ್ತಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ನಗುವನಹಳ್ಳಿಯಲ್ಲಿ ಬೋರ್ಡ್ ಹೈಸ್ಕೂಲ್ ಕಟ್ಟಡ ನಿರ್ಮಾಣಕ್ಕಾಗಿ ಅಂದು ಖ್ಯಾತ ನಟಿಯಾಗಿದ್ದ ಜಯಲಲಿತಾ ಅವರು, ಸಹಾಯಾರ್ಥ ನೃತ್ಯ ಪ್ರದರ್ಶನ ನೀಡಿದ್ದರು. 1967 ರ ಮಾರ್ಚ್ 19 ರಂದು ಭಾನುವಾರ ಸಂಜೆ ಮೈಸೂರು ಕ್ರಾಫರ್ಡ್ ಹಾಲ್ ನಲ್ಲಿ ನೃತ್ಯ ಕಾರ್ಯಕ್ರಮ ನಡೆದಿದ್ದು, 50 ರೂ., 25 ರೂ. ಹಾಗೂ 10 ರೂ ಪ್ರವೇಶ ದರ ನಿಗದಿಪಡಿಸಲಾಗಿತ್ತು.
ಹೀಗೆ ಜಯಲಲಿತಾ ಅವರು ನೃತ್ಯ ಪ್ರದರ್ಶನ ನೀಡಿ, ಶಾಲಾ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಲು ನೆರವಾಗಿದ್ದ ಪೋಸ್ಟರ್ ಜಾಲತಾಣದಲ್ಲೀಗ ವೈರಲ್ ಆಗಿದೆ.