ಎಲ್ಲೆಡೆ ಚಿತ್ರ ವಿಚಿತ್ರ ಘಟನೆಗಳು ಪ್ರತಿದಿನ ನಡೆಯುತ್ತಿರುತ್ತವೆ. ಗಣೇಶ ಹಾಲು ಕುಡಿದ ಎನ್ನುವುದರಿಂದ ಹಿಡಿದು ದೇವರ ಫೋಟೋದಲ್ಲಿ ತೀರ್ಥ ಬರುತ್ತಿದೆ ಎಂಬ ಸುದ್ದಿಯನ್ನೆಲ್ಲ ನೀವು ಓದಿದ್ದೀರಾ. ಇಂತಹದ್ದೇ ಒಂದು ಘಟನೆ ಈಗ ಕಾನ್ಪುರದಿಂದ ಬಂದಿದೆ.
ಕಾನ್ಪುರದ ಪನ್ಕಿ ನಿವಾಸಿ ಮಹೇಶ್ ಶರಣ್ ಮನೆಯಲ್ಲಿಟ್ಟಿದ್ದ ನೀರಿನ ಪಾತ್ರೆಯೊಂದರಲ್ಲಿ ವಿಷ್ಣುವಿನ ಸುದರ್ಶನ ಚಕ್ರದಂತಿರುವ ಆಕೃತಿ ಕಾಣ್ತಿದೆಯಂತೆ. ಇದನ್ನು ನೋಡಲು ಜನರು ತಂಡೋಪತಂಡವಾಗಿ ಬರ್ತಿದ್ದಾರೆ.
ಇದು ಭಗವಂತನ ಪವಾಡ ಎನ್ನುತ್ತ ನೀರಿನ ಪಾತ್ರೆಗೆ ಕೈ ಮುಗಿಯುತ್ತಿದ್ದಾರೆ. ದೂರದೂರುಗಳಿಂದ ಚಮತ್ಕಾರ ನೋಡಲು ಜನರು ಬರ್ತಿರುವುದರಿಂದ ಗಣೇಶ್ ಮನೆ ಜಾತ್ರೆಯಂತಾಗಿದೆ. ಸರತಿ ಸಾಲಿನಲ್ಲಿ ನಿಂತ ಜನರಿಗೆ ಗಣೇಶ್ ಪವಾಡವನ್ನು ತೋರಿಸ್ತಿದ್ದಾರೆ.