ಇದೇ ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರ 66 ನೇ ಜನ್ಮದಿನ. ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು ಬಿಜೆಪಿ ಪ್ಲಾನ್ ಮಾಡಿದೆ.
ನಮೋ ಜನ್ಮದಿನವನ್ನು ‘ಸೇವಾ ದಿವಸ’ವನ್ನಾಗಿ ಆಚರಿಸುವುದಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ತಿಳಿಸಿದ್ದಾರೆ. ಆ ದಿನ ಅವರು ತೆಲಂಗಾಣದಲ್ಲಿ ನಡೆಯಲಿರುವ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೋದಿ ಜನ್ಮದಿನವನ್ನು ಸಮಾಜ ಸೇವೆಗಾಗಿ ಮೀಸಲಿಡಲು ಪಕ್ಷದ ಲಕ್ಷಾಂತರ ಕಾರ್ಯಕರ್ತರು ನಿರ್ಧರಿಸಿದ್ದಾರೆ. ಇದು ನಿಜಕ್ಕೂ ಸಂತೋಷದ ವಿಚಾರ. ನಾನು ಕೂಡ ಒಬ್ಬ ಪಕ್ಷದ ಕಾರ್ಯಕರ್ತನಾಗಿ ತೆಲಂಗಾಣದಲ್ಲಿ ನಡೆಯಲಿರುವ ‘ಸ್ವಚ್ಛ ಭಾರತ ಅಭಿಯಾನ’ ದಲ್ಲಿ ಭಾಗಿಯಾಗುತ್ತೇನೆ ಅಂತಾ ಅಮಿತ್ ಷಾ ತಿಳಿಸಿದ್ದಾರೆ.
ಸಾರ್ವಜನಿಕ ಸೇವೆಗಿಂತ ಹೆಚ್ಚು ತೃಪ್ತಿಕರವಾದದ್ದು ಬೇರೇನೂ ಇಲ್ಲ. ಅಭಿವೃದ್ಧಿಯಿಂದ ಬಡವರಿಗೆ ಪ್ರಯೋಜನವಾಗಬೇಕು ಅನ್ನೋ ಪ್ರಧಾನಿ ಮೋದಿ ಅವರ ಮಾತು ನಮಗೆಲ್ಲ ಪ್ರೇರಣೆ ಅಂತಾ ಷಾ ಬಣ್ಣಿಸಿದ್ದಾರೆ.