ಕೇಂದ್ರ ಸರ್ಕಾರದ ಅಡಿಯಲ್ಲಿ ಪಿಂಚಣಿ ಪಡೆಯುವ ನಿವೃತ್ತ ಉದ್ಯೋಗಿಗಳಿಗೊಂದು ಖುಷಿ ಸುದ್ದಿ. ಪಿಂಚಣಿಗಾಗಿ ಇನ್ಮುಂದೆ ನೀವು ಕಚೇರಿಗೆ ಅಲೆಯಬೇಕಾಗಿಲ್ಲ. ಜೊತೆಗೆ ಉದ್ಯೋಗಿಗಳ ಚಿತ್ರಹಿಂಸೆ ಹಾಗೂ ಲಂಚಬಾಕರ ಜೇಬು ತುಂಬಿಸುವ ಕೆಲಸ ಮಾಡಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ನಿಮ್ಮ ಪಿಂಚಣಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ.
ಹಣಕಾಸು ಸಚಿವ ಅರುಣ್ ಜೇಟ್ಲಿ, ಪಿಂಚಣಿದಾರರ ನೆರವಿಗಾಗಿಯೇ ಹೊಸ ವೆಬ್ ಪೋರ್ಟಲ್ ಶುರುಮಾಡಿದ್ದಾರೆ. ನಿವೃತ್ತ ಉದ್ಯೋಗಿಗಳ ಬಳಿ ಮೊಬೈಲ್ ಇದ್ದರೆ ಸಾಕು. ಈ ಮೊಬೈಲ್ ವೆಬ್ ಪೋರ್ಟಲ್ ಗೆ ಲಾಗಿನ್ ಆದ್ರೆ ಪಿಂಚಣಿಯ ಎಲ್ಲ ಮಾಹಿತಿ ಲಭ್ಯವಾಗಲಿದೆ. ಪಿಂಚಣಿ ಎಷ್ಟಿದೆ?ಯಾವಾಗ ಬರುತ್ತೆ?ಏನು ಸಮಸ್ಯೆಯಾಗಿದೆ ಎಲ್ಲದರ ಮಾಹಿತಿಯನ್ನು ಇಲ್ಲಿ ಪಡೆಯಬಹುದಾಗಿದೆ.
ಇಷ್ಟೇ ಅಲ್ಲ, ಈ ಪೋರ್ಟಲ್ ನಲ್ಲಿಯೇ ದೂರುಗಳನ್ನು ನೀಡಬಹುದು. ಹಾಗೆ ಉತ್ತರವನ್ನು ಕೂಡ ಪೋರ್ಟಲ್ ಮೂಲಕವೇ ಪಡೆಯಬಹುದಾಗಿದೆ. ಪಿಂಚಣಿ ಹೊಂದಿದವರು ಎಸ್ ಎಂ ಎಸ್ ಮೂಲಕ ಮಾಹಿತಿ ಪಡೆಯಬಹುದು. ಪಿಂಚಣಿದಾರರಿಗೆ ಇದೊಂದು ಉಪಯುಕ್ತ ಪೋರ್ಟಲ್ ಆಗಲಿದೆ ಎಂದು ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.