ಮನಸ್ಸಿದ್ರೆ ಮಾರ್ಗ. ಛಲ ತೊಟ್ಟರೆ ಮನುಷ್ಯ ಏನೂ ಬೇಕಾದ್ರೂ ಸಾಧಿಸಬಹುದು. ಇದನ್ನು ಸಾಬೀತು ಪಡಿಸಿದ್ದಾರೆ ರಾಜಸ್ತಾನದ ಚೂರು ಜಿಲ್ಲೆಯ ದೇವೇಂದ್ರ ಜಜಾರಿಯಾ. 35 ವರ್ಷದ ದೇವೇಂದ್ರ ಪ್ಯಾರಾಲಿಂಪಿಕ್ಸ್ ಜಾವಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್ಸ್ ನಲ್ಲಿ ದೇವೇಂದ್ರ ಜಜಾರಿಯಾರ ಎರಡನೇ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ದೇವೇಂದ್ರ ಎಂಟು ವರ್ಷದಲ್ಲಿರುವಾಗ ಒಂದು ಕೈ ಕಳೆದುಕೊಂಡಿದ್ದಾರೆ. ಮರ ಹತ್ತುವ ವೇಳೆ ವಿದ್ಯುತ್ ತಂತಿಗೆ ಕೈ ತಾಗಿತ್ತು. 11000 ವೋಲ್ಟೇಜ್ ವಿದ್ಯುತ್ ತಂತಿ ದೇವೇಂದ್ರ ಒಂದು ಕೈ ಕಳೆದುಕೊಳ್ಳುವಂತೆ ಮಾಡಿತ್ತು. ವೈದ್ಯರ ಎಲ್ಲ ಪ್ರಯತ್ನ ವಿಫಲವಾಗಿತ್ತು. ಎಡಗೈ ಕತ್ತರಿಸುವುದು ಅನಿವಾರ್ಯವಾಯ್ತು.
ಒಂದು ಕೈ ಇಲ್ಲದಿದ್ದರೂ ದೇವೇಂದ್ರನ ಉತ್ಸಾಹ ಮಾತ್ರ ಕಡಿಮೆಯಾಗಿರಲಿಲ್ಲ. ಸತತ ಪ್ರಯತ್ನದ ಮೂಲಕ 2002 ರಲ್ಲಿ FESPIC ಗೇಮ್ಸ್, 2004ರಲ್ಲಿ ಅಥೆನ್ಸ್ ಪ್ಯಾರಾಲಂಪಿಕ್ಸ್, 2013 ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಹಾಗೂ ಈಗ ಚಿನ್ನದ ಪದಕ ಗೆದ್ದಿದ್ದಾರೆ. ಮಾರ್ಚ್ 2012 ರಲ್ಲಿ ದೇವೇಂದ್ರ ‘ಪದ್ಮಶ್ರೀ’ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.