ಕಂಪನಿಗಳು ಉದ್ಯೋಗಿಗಳಿಗೂ ಸ್ವಲ್ಪ ಮನರಂಜನೆ ಸಿಗಲಿ ಎನ್ನುವ ಕಾರಣಕ್ಕೆ ಆಗಾಗ ಕೆಲವೊಂದು ಆಟಗಳನ್ನು ಆಡಿಸುತ್ತೆ. ಸಹೋದ್ಯೋಗಿಗಳ ನಡುವೆ ಉತ್ತಮ ಬಾಂಧವ್ಯ ಬೆಳೆಸಲು ಇದು ಸಹಕಾರಿ. ಆದ್ರೆ ಚೀನಾದ ಕಂಪನಿಯೊಂದು ಆಟದ ಹೆಸರಲ್ಲಿ ಎಲ್ಲೆ ಮೀರಿದೆ.
ಹುವಾಯು ಹೆಸರಿನ ಕಂಪನಿ ಪುರುಷ ಉದ್ಯೋಗಿಗಳಿಗೆ ದ್ರಾಕ್ಷಿ ಹಣ್ಣು ತಿನ್ನುವ ಸ್ಪರ್ಧೆ ಏರ್ಪಡಿಸಿತ್ತು. ಆದ್ರೆ ಈ ದ್ರಾಕ್ಷಿ ಹಣ್ಣುಗಳನ್ನು ಮಹಿಳಾ ಉದ್ಯೋಗಿಗಳ ಎದೆ ಮೇಲೆ ತೂಗು ಹಾಕಲಾಗಿತ್ತು. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಪುರುಷ ಉದ್ಯೋಗಿಗಳು ಕಡಿಮೆ ಸಮಯದಲ್ಲಿ ಮಹಿಳೆಯ ಎದೆ ಬಳಿ ಇಟ್ಟಿದ್ದ ದ್ರಾಕ್ಷಿಯನ್ನು ಖಾಲಿ ಮಾಡಬೇಕಾಗಿತ್ತು.
ಪುರುಷ ಉದ್ಯೋಗಿಗಳ ಕೈ ಕಟ್ಟಿ ಈ ಸ್ಪರ್ಧೆಗೆ ಬಿಡಲಾಗ್ತಾ ಇತ್ತು. ಈ ರೀತಿ ಆಟಗಳು ಉದ್ಯೋಗಿಗಳ ನಡುವೆ ಉತ್ತಮ ಬಾಂಧವ್ಯ ಬೆಳೆಸುತ್ತಾ? ನಿರ್ಧಾರ ನಿಮಗೆ ಬಿಟ್ಟಿದ್ದು.