ಲೂಲಿಯಾ ವಂತೂರ್ ಅವರನ್ನು ಶೀಘ್ರದಲ್ಲೇ ವಿವಾಹವಾಗಲಿರುವ ಸಲ್ಮಾನ್ ಖಾನ್ ಅದಕ್ಕೂ ಮುನ್ನ ಮನೆ ಬದಲಾಯಿಸಲಿದ್ದಾರೆ. ಹಳೆ ಮನೆಯನ್ನು ಬಿಟ್ಟು ಹೊಸ ಮನೆ ಸೇರಲಿರುವ ಸಲ್ಮಾನ್ ನಂತರವೇ ವಿವಾಹವಾಗಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಕಳೆದ 40 ವರ್ಷಗಳಿಂದ ಮುಂಬೈನ ಬಾಂದ್ರಾದಲ್ಲಿರುವ ಗೆಲಾಕ್ಸಿ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದ ಖಾನ್ ಸಂಸಾರ ಬೇರೆ ಮನೆಗೆ ಶಿಫ್ಟ್ ಆಗಲಿದೆ. ಸಲ್ಮಾನ್ ಖಾನ್ ಅವರ ಹೊಸ ಮನೆ ಬಾಂದ್ರಾದ ಲಿಂಕಿಂಗ್ ರೋಡ್ ನಲ್ಲಿ ಇದೆ. ಲಿಟ್ಲ್ ಸ್ಟಾರ್ ಹೆಸರಿನ ಈ ಹೊಸ ಮನೆಯಲ್ಲಿ ಕೆಲ ಕಾಮಗಾರಿಗಳು ನಡೆಯುತ್ತಿದ್ದು, ಕಾಮಗಾರಿ ಪೂರ್ಣಗೊಂಡ ನಂತರ ಸಲ್ಮಾನ್ ಖಾನ್ ಆ ಮನೆಗೆ ತೆರಳಲಿದ್ದಾರೆ ಎನ್ನಲಾಗಿದೆ.
ಹೊಸ ಮನೆ ಖರೀದಿಸಿರುವ ಸಲ್ಮಾನ್, ತಮ್ಮ ಗೆಲಾಕ್ಸಿ ಅಪಾರ್ಟ್ ಮೆಂಟ್ ಅನ್ನು ಮಾರಾಟ ಮಾಡಿಲ್ಲ. ಹಾಗಾಗಿ ಹೊಸ ಮನೆಯಲ್ಲಿ ಸಲ್ಮಾನ್ ಖಾನ್ ದಂಪತಿಗಳು ಮಾತ್ರ ಇರುತ್ತರಾ ಅಥವಾ ಖಾನ್ ಪರಿವಾರ ಕೂಡ ಹೋಗುತ್ತಾ ಎಂಬುದನ್ನು ಕಾದುನೋಡಬೇಕಿದೆ.