ರಾಜಸ್ತಾನದಲ್ಲಿ ಸೈನಿಕನ ಅಂತ್ಯ ಸಂಸ್ಕಾರದ ವೇಳೆ ನಡೆದ ಘಟನೆಯ ಭಯಾನಕ ವಿಡಿಯೋವೊಂದು ಹೊರಬಿದ್ದಿದೆ. ಶವಸಂಸ್ಕಾರಕ್ಕೆ ಮರದ ತುಂಡುಗಳು ಕಡಿಮೆ ಬಿದ್ದಿದ್ದರಿಂದ ಶವವನ್ನು ಕೊಡಲಿಯಿಂದ ಕತ್ತರಿಸಿ ಬೆಂಕಿಗೆ ಹಾಕಲಾಗಿದೆ.
ರಮೇಶ್ ಕುಮಾರ್ ಎಂಬಾತ ಸೇನೆಯಲ್ಲಿ ಕೆಲಸ ಮಾಡ್ತಿದ್ದ. ಸೆಪ್ಟೆಂಬರ್ 10ರಂದು ಶ್ರೀನಗರದ ಆರ್ಮಿ ಆಸ್ಪತ್ರೆಯಲ್ಲಿ ರಮೇಶ್ ಕುಮಾರ್ ಸಾವನ್ನಪ್ಪಿದ್ದ. ಸೇನಾ ಗೌರವದೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಗಿದೆ.
ಈ ವೇಳೆ ಶವವನ್ನು ತುಂಡರಿಸಿ ಬೆಂಕಿಗೆಸೆದ ದೃಶ್ಯ ಬಹಿರಂಗವಾಗಿದೆ. ಆದ್ರೆ ರಮೇಶ್ ಸಂಬಂಧಿಕರು ಹಾಗೂ ಸ್ಥಳದಲ್ಲಿದ್ದ ಅಧಿಕಾರಿಗಳು ಈ ದೃಶ್ಯಗಳು ಸುಳ್ಳು ಎನ್ನುತ್ತಿದ್ದಾರೆ. ವಿಡಿಯೋ ನೋಡಿರುವ ರಾಜಸ್ತಾನ ಸರ್ಕಾರ, ಸೂಕ್ತ ತನಿಖೆಗೆ ಆದೇಶ ನೀಡಿದೆ.