ಆತನ ಸಹವಾಸ ಬೇಡ ಅಂತಾನೇ ಪತ್ನಿ ಅವನ ವಿರುದ್ಧ ಕಿರುಕುಳ ಪ್ರಕರಣ ದಾಖಲಿಸಿದ್ಲು. ಆದ್ರೆ ಇಂದೋರ್ ನಲ್ಲಿ ರೈಲ್ವೆ ನೌಕರನಾಗಿರುವ ಆತ ಮಾತ್ರ ತನ್ನ ಕೆಟ್ಟ ಬುದ್ಧಿ ಬಿಟ್ಟಿರಲಿಲ್ಲ.
ಪರಿತ್ಯಕ್ತ ಪತ್ನಿಗೆ ಮೊಬೈಲ್ ಮೂಲಕ ಅಶ್ಲೀಲ ಸಂದೇಶ ಹಾಗೂ ಫೋಟೋಗಳನ್ನು ಕಳಿಸುತ್ತಿದ್ದ. ಬುರ್ಹನ್ಪುರ ಜಿಲ್ಲೆಯ ನೆಪನಗರ್ ನಿವಾಸಿ ಲೋಕೇಶ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪತಿ ತನ್ನ ಮೇಲೆ ದೌರ್ಜನ್ಯ ಎಸಗುತ್ತಿರುವುದಾಗಿ ಪತ್ನಿ ಪ್ರಕರಣ ದಾಖಲಿಸಿದ್ದಳು. ಹಾಗಾಗಿ 28 ವರ್ಷದ ಲೋಕೇಶ್ ಕುಮಾರ್ ಹಾಗೂ ಆತನ ಪತ್ನಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ.
ತನ್ನ ಮೇಲೆ ಪ್ರಕರಣ ದಾಖಲಿಸಿದ್ದಕ್ಕೆ ಸಿಟ್ಟಿಗೆದ್ದ ಲೋಕೇಶ್ ಕುಮಾರ್ ಅಶ್ಲೀಲ ಸಂದೇಶ ಮತ್ತು ಫೋಟೋಗಳನ್ನು ಪತ್ನಿಗೆ ಕಳಿಸಲಾರಂಭಿಸಿದ್ದ. ಅನಿವಾರ್ಯವಾಗಿ ಪೊಲೀಸ್ ಮೊರೆ ಹೋದ ಪತ್ನಿ, ಆತನನ್ನು ಜೈಲಿಗಟ್ಟಿದ್ದಾಳೆ.