ಸುಂದರವಾಗಿ ಕಾಣಲು ಹುಡುಗಿಯರು ಏನೆಲ್ಲ ಕಸರತ್ತು ಮಾಡ್ತಾರೆ. ಹಣ ಇರುವ ಹುಡುಗಿಯರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ತಾರೆ. ಆದ್ರೆ ಇಲ್ಲೊಬ್ಬ ಹುಡುಗಿ ಬಾರ್ಬಿ ಡಾಲ್ ತರ ಕಾಣಬೇಕು ಎನ್ನುವ ಕಾರಣಕ್ಕೆ ಒಂದಲ್ಲ ಎರಡಲ್ಲ 20 ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ.
ವೆನಿಜುವೆಲಾದ ಮಾಡೆಲ್ Aleira Avendano ತನ್ನ 18ನೇ ವಯಸ್ಸಿನಲ್ಲಿಯೇ ಬ್ರೆಸ್ಟ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ. 20 ಇಂಚಿನ ತೆಳ್ಳಿನ ಬಳಕುವ ಸೊಂಟ ಪಡೆಯಲು ಕಳೆದ 7 ವರ್ಷಗಳಿಂದ ಬಿಗಿಯಾದ ಸೊಂಟದ ಉಡುಪು ಧರಿಸುತ್ತಿದ್ದಾಳೆ. ದೊಡ್ಡ ಬ್ರೆಸ್ಟ್ ಹೊಂದಲು Aleira Avendano ಈವರೆಗೆ ನಾಲ್ಕು ಬ್ರೆಸ್ಟ್ ಸರ್ಜರಿ ಮಾಡಿಸಿಕೊಂಡಿದ್ದಾಳೆ.
ಮೂಗು ಹಾಗೂ ಹಲ್ಲಿನ ಶಸ್ತ್ರಚಿಕಿತ್ಸೆ ಕೂಡ ಮಾಡಿಸಿಕೊಂಡಿರುವ ಮಾಡೆಲ್, ಸುಂದರ ಹುಡುಗಿಯರು ಮಾತ್ರ ಇಂತಹ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ತಾರೆ ಎನ್ನುತ್ತಾಳೆ. ಬ್ರೆಸ್ಟ್ ಸರ್ಜರಿ ನಂತ್ರ ಇನ್ಸ್ಟ್ರಾಗ್ರಾಮ್ ನಲ್ಲಿ 5 ಲಕ್ಷಕ್ಕೂ ಹೆಚ್ಚು ಫಾಲೋರ್ವಸ್ ಹೊಂದಿದ್ದಾಳೆ Aleira Avendano.