ಚಿತ್ರ ಪ್ರೇಮಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ‘ಮುಂಗಾರು ಮಳೆ-2’ ಕರ್ನಾಟಕ ಬಂದ್ ಹಿನ್ನಲೆಯಲ್ಲಿ 1 ದಿನ ತಡವಾಗಿ ರಿಲೀಸ್ ಆಗಿದ್ದು, ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.
‘ಮುಂಗಾರು ಮಳೆ’ ಬಂದ ಸುಮಾರು 10 ವರ್ಷಗಳ ನಂತರ, ‘ಮುಂಗಾರು ಮಳೆ-2’ ಬಂದಿದ್ದು, ಪ್ರೇಕ್ಷಕರಲ್ಲಿ ಆರಂಭದಿಂದಲೂ ಭಾರೀ ನಿರೀಕ್ಷೆ ಮೂಡಿಸಿತ್ತು. ನಿರೀಕ್ಷೆಯಂತೆಯೇ ರಾಜ್ಯದಲ್ಲಿ ಚಿತ್ರಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ಎಲ್ಲಾ ಕಡೆಗಳಲ್ಲಿ ಪ್ರೇಕ್ಷಕರು ಚಿತ್ರ ವೀಕ್ಷಣೆಗೆ ಮುಗಿಬಿದ್ದಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್, ಗೋಲ್ಡನ್ ಸ್ಟಾರ್ ಗಣೇಶ್, ನೇಹಾ ಶೆಟ್ಟಿ ಮೊದಲಾದವರು ಅಭಿನಯಿಸಿದ್ದಾರೆ.
ಶಶಾಂಕ್ ಚಿತ್ರ ನಿರ್ದೇಶನ ಮಾಡಿದ್ದು, ಟ್ರೇಲರ್ ಮತ್ತು ಹಾಡುಗಳಿಂದ ಸೌಂಡ್ ಮಾಡಿದ್ದ ಚಿತ್ರ, ಮೇಕಿಂಗ್ ನಿಂದಲೂ ಗಮನ ಸೆಳೆದಿತ್ತು. ಚೆನ್ನೈನಲ್ಲಿ ಪ್ರದರ್ಶನ ಕಂಡಿಲ್ಲ. ಕಾವೇರಿ ವಿವಾದದ ಕಾರಣಕ್ಕೆ ವಿತರಕರು ಚಿತ್ರ ಪ್ರದರ್ಶನ ಮಾಡಿಲ್ಲ ಎನ್ನಲಾಗಿದೆ.