Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ಗ್ರಂಥಾಲಯ ನಡೆಸುತ್ತಾಳೆ 9 ವರ್ಷದ ಬಾಲೆ..!

$
0
0
ಗ್ರಂಥಾಲಯ ನಡೆಸುತ್ತಾಳೆ 9 ವರ್ಷದ ಬಾಲೆ..!

ತಾವಾಯಿತು, ತಮ್ಮ ಅಭ್ಯಾಸವಾಯಿತು ಎಂದು ಇರುವ ವಯಸ್ಸಿನಲ್ಲಿ, 9 ವರ್ಷದ ಬಾಲಕಿಯೊಬ್ಬಳು ಗ್ರಂಥಾಲಯವೊಂದನ್ನು ನಡೆಸುತ್ತಿದ್ದಾಳೆ.

ಭೋಪಾಲಿನ ಮುಸ್ಕಾನ್ ಎಂಬ ವಿದ್ಯಾರ್ಥಿನಿ ಚಿಕ್ಕ ವಯಸ್ಸಿನಲ್ಲೇ ಎಲ್ಲರ ಮೆಚ್ಚುಗೆ ಗಳಿಸಿದ್ದಾಳೆ. ಇವಳು ಒಂದು ಪುಟ್ಟ ಗ್ರಂಥಾಲಯವನ್ನು ನಡೆಸುತ್ತಿದ್ದಾಳೆ. ಇವಳ ಗ್ರಂಥಾಲಯದಲ್ಲಿ 121 ಪುಸ್ತಕಗಳಿವೆ. ಮೂರನೇ ಕ್ಲಾಸಿನಲ್ಲಿ ಓದುತ್ತಿರುವ ಮುಸ್ಕಾನ್ ನ ಗ್ರಂಥಾಲಯ ಇರುವುದು ಒಂದು ಸ್ಲಮ್ ನಲ್ಲಿ.

ಶಾಲೆ ಮುಗಿದ ನಂತರ ಮುಸ್ಕಾನ್ ತನ್ನ ಮನೆಯ ಮುಂದೆ ಪುಸ್ತಕಗಳನ್ನು ಇಟ್ಟುಕೊಳ್ಳುತ್ತಾಳೆ. ಸ್ಲಮ್ ಮಕ್ಕಳನ್ನೆಲ್ಲ ಕರೆದು ಅವರಿಗೆ ಪುಸ್ತಕಗಳನ್ನು ಓದಲು ಪ್ರೇರೇಪಿಸುತ್ತಾಳೆ.

‘ಬಾಲರ ಪುಸ್ತಕಾಲಯ’ ಎಂಬ ಹೆಸರಿನ ಈ ಗ್ರಂಥಾಲಯಕ್ಕೆ NITI ದೆಹಲಿಯಲ್ಲಿ ‘ಥಾಟ್ ಲೀಡರ್’ ಪುರಸ್ಕಾರ ನೀಡಲು ನಿರ್ಧರಿಸಿದೆ.


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>