ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ 40ನೇ ಹುಟ್ಟುಹಬ್ಬದ ಸಂಭ್ರಮ. ಕುಂದ್ರಾಗೆ ಈ ಬಾರಿ ಶಿಲ್ಪಾ ಶೆಟ್ಟಿ ಎಂತಹ ಗಿಫ್ಟ್ ಕೊಡಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ನಿರೀಕ್ಷೆ ಹುಸಿಗೊಳಿಸದ ಶಿಲ್ಪಾ, ರಾಜ್ ಗೆ ಅತ್ಯಮೂಲ್ಯ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ.
ಪತಿಯ ಬರ್ತಡೇ ಸೆಲೆಬ್ರೇಷನ್ ಗಾಗಿ ಅದ್ಧೂರಿ ಪಾರ್ಟಿಯೊಂದನ್ನು ಆಯೋಜಿಸಿದ್ರು, ಅಷ್ಟೇ ಅಲ್ಲ ಹುಟ್ಟು ಹಬ್ಬದ ಸ್ಪೆಷಲ್ ಉಡುಗೊರೆಯಾಗಿ ರಾಜ್ ಕುಂದ್ರಾ ಅವರ ತಂದೆಯನ್ನು ಲಂಡನ್ ನಿಂದ ಕರೆಸಿದ್ರು.
ಪತ್ನಿಯ ಈ ಸರ್ಪ್ರೈಸ್ ಪ್ಲಾನ್ ನೋಡಿ ರಾಜ್ ಕುಂದ್ರಾ ಫುಲ್ ಖುಷಿಯಾಗಿದ್ದಾರೆ. ಟ್ವಿಟ್ಟರ್ ನಲ್ಲಿ ಶಿಲ್ಪಾ, ತಮ್ಮ ಪತಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ, ತಂದೆಯನ್ನು ಕರೆಸುವ ಮೂಲಕ ತಮಗೆ ಅಮೂಲ್ಯ ಉಡುಗೊರೆ ಕೊಟ್ಟ ಪತ್ನಿಗೆ ಕುಂದ್ರಾ ಥ್ಯಾಂಕ್ಸ್ ಕೂಡ ಹೇಳಿದ್ರು.
ರಾಜ್ ಕುಂದ್ರಾ ಹುಟ್ಟುಹಬ್ಬದ ಪಾರ್ಟಿಯಲ್ಲಿ ಜೆನಿಲಿಯಾ, ರಿತೇಶ್ ದೇಶ್ ಮುಖ್, ಸೋಫಿ ಅಲಿ, ಶಮಿತಾ ಶೆಟ್ಟಿ ಸೇರಿದಂತೆ ಹಲವು ಬಾಲಿವುಡ್ ಸ್ಟಾರ್ ಗಳು ಪಾಲ್ಗೊಂಡಿದ್ರು.
2009ರಲ್ಲಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ವಿವಾಹ ನೆರವೇರಿತ್ತು. ಇವರ ದಾಂಪತ್ಯದಲ್ಲಿ ವಿರಸ ಮೂಡಿದ್ದು, ವಿಚ್ಛೇದನ ಪಡೆಯುತ್ತಿದ್ದಾರೆ ಅನ್ನೋ ಊಹಾಪೋಹವಿತ್ತು. ಈ ಗಾಸಿಪ್ ಗೆ ತಿಲಾಂಜಲಿ ಇಟ್ಟಿರುವ ಕುಂದ್ರಾ ದಂಪತಿ ಎಲ್ಲವೂ ಸರಿಯಾಗಿದೆ ಅನ್ನೋದನ್ನು ಸಾರಿ ಹೇಳಿದ್ದಾರೆ.