ಬಾಲಿವುಡ್ ಬೇಬೋ ಕರೀನಾ ಕಪೂರ್ ಗರ್ಭಿಣಿಯಾದ್ರೂ ವಿಶ್ರಾಂತಿ ಪಡೆಯುತ್ತಿಲ್ಲ. ಒಂದಲ್ಲ ಒಂದು ಶೂಟಿಂಗ್ ನಲ್ಲಿ ಕರೀನಾ ಬ್ಯುಸಿಯಾಗಿದ್ದಾಳೆ. ಎರಡು ದಿನಗಳ ಹಿಂದೆ ಮೆಹಬೂಬ್ ಸ್ಟುಡಿಯೋದಲ್ಲಿ ಕರೀನಾ ಕ್ಯಾಮರಾ ಕಣ್ಣಿಗೆ ಸೆರೆಯಾದ್ಲು.
ಜಾಹೀರಾತೊಂದರ ಶೂಟಿಂಗ್ ಗೆ ಮೆಹಬೂಬ್ ಸ್ಟುಡಿಯೋಗೆ ಬಂದಿದ್ಲು ಕರೀನಾ. ಮೊದಲು ಮೇಕಪ್ ಇಲ್ಲದೆ ಕ್ಯಾಮರಾಕ್ಕೆ ಫೋಸ್ ಕೊಟ್ಟ ಬೇಬೋ ನಂತ್ರ ಮೇಕಪ್ ಮಾಡಿಕೊಂಡು ಕ್ಯಾಮರಾ ಮುಂದೆ ಬಂದ್ಲು. ಬೇಬಿ ಬಂಪ್ ಜೊತೆ ಸುಂದರವಾಗಿ ಕಾಣ್ತಿದ್ದ ಬೆಡಗಿ ಸಿಕ್ಕಾಪಟ್ಟೆ ಖುಷಿಯಾಗಿದ್ದಂತೆ ಕಂಡುಬಂತು.
ಡಿಸೆಂಬರ್ ನಲ್ಲಿ ಕರೀನಾ ಮಗುವಿಗೆ ಜನ್ಮ ನೀಡಲಿದ್ದಾಳೆ. ಗರ್ಭಿಣಿಯಾದ್ರೂ ರಜಾ ತೆಗೆದುಕೊಳ್ಳುವುದಿಲ್ಲ ಎಂದು ಹಿಂದೆಯೇ ಕರೀನಾ ಸ್ಪಷ್ಟಪಡಿಸಿದ್ದಾಳೆ. ಸಹಿ ಹಾಕಿದ ಎಲ್ಲ ಪ್ರಾಜೆಕ್ಟನ್ನು ಬೇಗ ಬೇಗ ಮುಗಿಸ್ತಿದ್ದಾಳೆ ಕರೀನಾ.