ಪ್ರಖ್ಯಾತ ಬಾಲಿವುಡ್ ನಟನೊಬ್ಬ ಕಪ್ಪು ಹಣವನ್ನು ಬಚ್ಚಿಡಲು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮೊರೆ ಹೋಗಿದ್ದನಂತೆ. ತೆರಿಗೆ ವಂಚಿಸಿ ಹಣವನ್ನು ಬೇರೆ ದೇಶಗಳಲ್ಲಿ ಸುರಕ್ಷಿತವಾಗಿ ಇಡುವ ಬಗ್ಗೆ ಶಾರ್ಜಾ ಮತ್ತು ಯುಎಇ ಯಲ್ಲಿರುವ ದಾವೂದ್ ಸಹಚರರ ಜೊತೆ ಫೋನ್ ನಲ್ಲಿ ಮಾತುಕತೆ ನಡೆದಿದೆ ಅಂತಾ ಕೇಂದ್ರ ಗುಪ್ತಚರ ದಳ ಮಾಹಿತಿ ನೀಡಿದೆ.
ಬಾಲಿವುಡ್ ನಟ ಹಾಗೂ ಕೆಲ ಪ್ರಮುಖ ರಾಜಕಾರಣಿಗಳ ಕಪ್ಪು ಹಣವನ್ನು ಪನಾಮಾ ಮತ್ತು ಕೆನಡಾದಲ್ಲಿ ಬಚ್ಚಿಡಲು ದಾವೂದ್ ಸಹಕರಿಸಿದ್ದಾನಂತೆ. ದಾವೂದ್ ಈಗ ತನ್ನ ಕೋಡ್ ನೇಮ್ ಅನ್ನು ‘ಬಡೆ ಹಝರತ್’ ಅಂತಾ ಬದಲಾಯಿಸಿಕೊಂಡಿದ್ದಾನೆ. ಬಾಲಿವುಡ್ ಸ್ಟಾರ್ ಸೇರಿದಂತೆ ಹಲವು ಪ್ರಮುಖರು ‘ಡಿ’ ಗ್ಯಾಂಗ್ ಜೊತೆ ಹಣಕಾಸು ವ್ಯವಹಾರ ನಡೆಸುತ್ತಿದ್ದಾರೆ ಅನ್ನೋ ಸುದ್ದಿ ಸಂಚಲನ ಎಬ್ಬಿಸಿದೆ. ದಾವೂದ್ ಜೊತೆ ಸ್ನೇಹ ಬೆಳೆಸಿರುವ ನಟನ ಹೆಸರನ್ನು ಗುಪ್ತಚರ ಇಲಾಖೆ ಬಹಿರಂಗಪಡಿಸಿಲ್ಲ.
ರಾಜಕಾರಣಿಗಳು ಮತ್ತು ಉದ್ಯಮಿಗಳು ಯಾರೆಲ್ಲಾ ಇದರಲ್ಲಿ ಭಾಗಿಯಾಗಿದ್ದಾರೆ ಅನ್ನೋದನ್ನು ಪತ್ತೆ ಮಾಡಲಾಗ್ತಾ ಇದೆ. ಬಾಲಿವುಡ್ ನ ಕೆಲವು ಸೆಲೆಬ್ರಿಟಿಗಳು ದಾವೂದ್ ಜೊತೆ ನಂಟು ಬೆಳೆಸಿಕೊಂಡಿದ್ದಾರೆ ಅನ್ನೋದಂತೂ ಖಾತ್ರಿಯಾಗಿದೆ.