ಪಾಕಿಸ್ತಾನದ ರಾಷ್ಟ್ರೀಯ ಮಾಹಿತಿ ಮತ್ತು ನೋಂದಣಿ ಪ್ರಾಧಿಕಾರ (NARADA)ದ ಯಡವಟ್ಟಿನಿಂದಾಗಿ ಮೊಮ್ಮಗನ ವಯಸ್ಸು ಅಜ್ಜನ ವಯಸ್ಸನ್ನೂ ಮೀರಿದೆ.
ಪ್ರಾಧಿಕಾರದ ಈ ತಪ್ಪಿನಿಂದಾಗಿ ಮೊಮ್ಮಗನಾದ ನಾಸೀರ್ ಅಹಮದ್ ಗೆ ಹಲವಾರು ತೊಂದರೆಗಳು ಎದುರಾಗುತ್ತಿವೆ.
ಇದರಿಂದ ಆತನಿಗೆ ಉದ್ಯೋಗಕ್ಕೆ ಸೇರ್ಪಡೆಯಾಗಲು ಅಡ್ಡಿಯಾಗುತ್ತಿದೆ. ನಾಸೀರ್ ಅಹಮದ್ ಬಳಿಯಿರುವ ಗುರುತಿನ ಚೀಟಿಯ ಪ್ರಕಾರ ಅವನು ತನ್ನ ತಂದೆಯಷ್ಟೇ ಅಲ್ಲ ಅಜ್ಜನಿಗಿಂತಲೂ ಹೆಚ್ಚಿನ ವಯಸ್ಸಿನವನಾಗಿದ್ದಾನೆ. ಮಾಹಿತಿ ಮತ್ತು ನೋಂದಣಿ ಪ್ರಾಧಿಕಾರ ಇವನ ಜನ್ಮ 1900 ರಲ್ಲಿ ಆಗಿದೆ ಎಂದು ನಮೂದಿಸಿದೆ. ಈ ಯಡವಟ್ಟು ಸರಿಪಡಿಸಿಕೊಳ್ಳಲು ನಾಸೀರ್ ಈಗ ಕಛೇರಿ ಅಲೆಯುತ್ತಿದ್ದಾನೆ.