ಚಂಡೀಗಢದಲ್ಲಿ ಮಾನವೀಯತೆಯನ್ನೇ ಮರೆತ ಯುವಕನೊಬ್ಬ ಮಾಡಿದ ತಿಳಿಗೇಡಿ ಕೃತ್ಯ ಇದು. ಈತ ಮುಗ್ಧ ಪ್ರಾಣಿ ನಾಯಿಯ ಮೇಲೆ ತನ್ನ ಪ್ರತಾಪ ತೋರಿಸಿದ್ದಾನೆ, ಮನಸೋ ಇಚ್ಛೆ ಅದನ್ನು ಹಿಂಸಿಸಿದ್ದಾನೆ.
ಬೀದಿಯಲ್ಲಿ ಅಡ್ಡಾಡುತ್ತಿದ್ದ ನಾಯಿಯೊಂದನ್ನು ಹಿಡಿದುಕೊಂಡ ಯುವಕ, ಗಿರಗಿರನೆ ನಾಲ್ಕು ಸುತ್ತು ತಿರುಗಿಸ್ತಾನೆ. ನೋವಿನಿಂದ ನಾಯಿ ಕೂಗಿಕೊಳ್ತಾ ಇದ್ರು ಅವನ ಮನಸ್ಸು ಕರಗಿಲ್ಲ. ನಾಯಿಯನ್ನು ಗಿರಗಿರನೆ ಸುತ್ತಿಸಿ ನಂತರ ಅಲ್ಲೇ ಇದ್ದ ಕಲ್ಲಿನ ಮೇಲೆ ಅಪ್ಪಳಿಸಿದ್ದಾನೆ. ಆ ರಭಸಕ್ಕೆ ಮೂಕಪ್ರಾಣಿಗೆ ಪ್ರಾಣವೇ ಹೋದಷ್ಟು ನೋವಾಗಿದೆ. ಹೇಗಾದ್ರೂ ಜೀವ ಉಳಿದರೆ ಸಾಕು ಅಂತಾ ಅಲ್ಲಿಂದ ಓಡಿ ಹೋಗಿದೆ. ಯುವಕನೊಬ್ಬ ನಾಯಿಯ ಜೀವ ಹಿಂಡುತ್ತಿದ್ರೆ ಇದನ್ನೆಲ್ಲ ತಮಾಷೆಯಂತೆ ಅಕ್ಕಪಕ್ಕದವರೆಲ್ಲ ನೋಡುತ್ತ ನಿಂತಿದ್ದರು.
ನಾಯಿ ಅಲ್ಲಿಂದ ಓಡಿ ಹೋಗ್ತಿದ್ದಂತೆ ಎಲ್ಲರೂ ಜಗತ್ತನ್ನೇ ಗೆದ್ದಂತೆ ಕೇಕೆ ಹಾಕಿ ಚಪ್ಪಾಳೆ ತಟ್ಟಿ ನಕ್ಕಿದ್ದಾರೆ. ಯುವಕನೊಬ್ಬನ ಈ ಅಮಾನುಷ ಕೃತ್ಯದ ವಿಡಿಯೋ ವೈರಲ್ ಆಗಿದ್ದು ಫೇಸ್ ಬುಕ್ ನಲ್ಲಿ ಹರಿದಾಡುತ್ತಿದೆ. ಪ್ರಾಣಿ ದಯಾ ಸಂಘದವರು ಪ್ರಕರಣ ಕೂಡ ದಾಖಲಿಸಿದ್ದಾರೆ.