ಜಗತ್ತಿನಲ್ಲಿ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಂದು ಸುದ್ದಿಗಳನ್ನು ನಂಬೋದು ಕಷ್ಟ. ಒಕ್ಲಹೋಮನಿಂದ ಅಂತಹುದೇ ಸುದ್ದಿ ಹೊರಬಿದ್ದಿದೆ. 43 ವರ್ಷದ ತಾಯಿ 23 ವರ್ಷದ ತನ್ನ ಮಗಳನ್ನೇ ಮದುವೆಯಾಗಿದ್ದಾಳೆ.
ಮಾರ್ಚ್ 2016ರಲ್ಲಿ ತಾಯಿ ಪೆಟ್ರೀಷಿಯಾ ಮಗಳು ಮಿಸ್ಟಿಯನ್ನು ಮದುವೆಯಾಗಿದ್ದಾಳೆಂಬ ದಾಖಲೆ ಇದೆ. ಮಾನವ ಸೇವಾ ಆಯೋಗದ ಅಧಿಕಾರಿಗಳು ಆಗಸ್ಟ್ ನಲ್ಲಿ ಈ ಸಂಬಂಧ ದೂರು ದಾಖಲಿಸಿಕೊಂಡಿದ್ದರು. ಪೆಟ್ರೀಷಿಯಾಗೆ ಮಿಸ್ಟಿ ಸೇರಿ ಮೂರು ಮಕ್ಕಳಿದ್ದಾರೆ.
ಮಿಸ್ಟಿ ಮದುವೆಯಾಗಿ ಕಾನೂನು ಮುರಿಯುವಂತ ಯಾವುದೇ ಕೆಲಸ ಮಾಡಿಲ್ಲ ಎನ್ನುವುದು ಪೆಟ್ರಿಷಿಯಾಳ ವಾದವಾಗಿದೆ. ತಾಯಿ, ಮಗಳನ್ನು ಬಂಧಿಸಿರುವ ಪೊಲೀಸರು ಸ್ಟೀಫನ್ಸ್ ಕೌಂಟಿ ಜೈಲಿನಲ್ಲಿರಿಸಿದ್ದಾರೆ. 10,000 ಡಾಲರ್ ನೀಡಿದ್ರೆ ಇವರಿಗೆ ಜಾಮೀನು ಸಿಗಲಿದೆ. ಒಂದು ವೇಳೆ ಆರೋಪ ಸಾಬೀತಾದಲ್ಲಿ 10 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಒಕ್ಲಹೋಮ ಕಾನೂನಿನ ಪ್ರಕಾರ ಹತ್ತಿರದ ರಕ್ತ ಸಂಬಂಧಿಗಳ ಜೊತೆ ಮದುವೆಯಾಗುವಂತಿಲ್ಲ. ಕಾನೂನು ಮುರಿದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಪೆಟ್ರಿಷಿಯಾ ಹಿಂದಿನ ವರ್ಷ ತನ್ನ ಮಗನ ಜೊತೆಯೂ ಮದುವೆಯಾಗಿದ್ದಳು ಎನ್ನಲಾಗ್ತಾ ಇದೆ.