ನವದೆಹಲಿ: ಭಾರತ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವೆ ಅಕ್ಟೋಬರ್ 19 ರಂದು ನಡೆಯಬೇಕಿದ್ದ ಏಕದಿನ ಪಂದ್ಯವನ್ನು ಒಂದು ದಿನ ಮುಂದೂಡಲಾಗಿದೆ.
ನವದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಅಕ್ಟೋಬರ್ 19 ರಂದು ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಏಕದಿನ ಕ್ರಿಕೆಟ್ ಪಂದ್ಯ ನಡೆಯಬೇಕಿತ್ತು. ಅದೇ ದಿನ ಕರ್ವಾ ಚೌತ್ ಹಬ್ಬ ಇರುವ ಕಾರಣ, ದೆಹಲಿ ಕ್ರಿಕೆಟ್ ಸಂಸ್ಥೆ ವತಿಯಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಮನವಿ ಮಾಡಲಾಗಿತ್ತು. ಮನವಿಯನ್ನು ಪುರಸ್ಕರಿಸಿದ ಮಂಡಳಿ, ಪಂದ್ಯ ಮುಂದೂಡಿದೆ.
ಅಕ್ಟೋಬರ್ 19 ರಂದು ನಡೆಯಬೇಕಿದ್ದ ಏಕದಿನ ಪಂದ್ಯವನ್ನು 20 ರಂದು ನಡೆಸಲಾಗುವುದು ಎಂದು ದೆಹಲಿ ಕ್ರಿಕೆಟ್ ಸಂಸ್ಥೆ ಉಪಾಧ್ಯಕ್ಷ ಸಿ.ಕೆ. ಖನ್ನಾ ಮಾಹಿತಿ ನೀಡಿದ್ದಾರೆ.