ಇದು ಪವಾಡವೋ ಅಥವಾ ಪ್ರಕೃತಿಯ ವಿಸ್ಮಯವೋ ಗೊತ್ತಿಲ್ಲ. ರಷ್ಯಾದಲ್ಲಿ ನದಿಯೊಂದು ಇದ್ದಕ್ಕಿದ್ದಂತೆ ಕೆಂಪು ಬಣ್ಣಕ್ಕೆ ತಿರುಗಿದೆ. ಆರ್ಕ್ ಟಿಕ್ ನಗರದ Norilsk ನಲ್ಲಿರುವ ನದಿಯಲ್ಲಿ ರಕ್ತವೇ ಹರಿಯುತ್ತಿರುವಂತೆ ಭಾಸವಾಗುತ್ತಿದೆ.
ಡಲ್ಡಿಕನ್ ನದಿಯಲ್ಲಿ ನಡೆದ ಈ ವಿಚಿತ್ರ ಘಟನೆಯಿಂದ ಸುತ್ತಮುತ್ತಲ ನಿವಾಸಿಗಳೆಲ್ಲ ದಿಗ್ಭ್ರಮೆಗೊಳಗಾಗಿದ್ದಾರೆ. ನದಿಯು ಕೆಂಪಾಗಲು ನೈಸರ್ಗಿಕ ಕಾರಣಗಳೇನಾದ್ರೂ ಇವೆಯೇ ಅನ್ನೋದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ.
ರಾಸಾಯನಿಕವೊಂದರ ಬಿಡುಗಡೆಯಿಂದ ನದಿ ಕೆಂಪಗಾಗಿರಬಹುದು ಎನ್ನಲಾಗುತ್ತಿದೆ. ಕಂಪನಿಯೊಂದರ ಪೈಪ್ ಲೈನ್ ಸೋರಿಕೆಯಿಂದ ರಾಸಾಯನಿಕ ನದಿ ಸೇರಿರುವ ಸಾಧ್ಯತೆ ಕೂಡ ಇದೆ. Norilsk Nickel ಮಾಲೀಕತ್ವದ ಕಂಪನಿ ತಮ್ಮ ಪ್ಲಾಂಟ್ ನಿಂದ ಅಂಥದ್ದೇನೂ ಅವಘಡ ನಡೆದಿಲ್ಲ ಅಂತಾ ಸ್ಪಷ್ಟಪಡಿಸಿದೆ.
ಡಲ್ಡಿಕನ್ ನದಿ ಕೆಂಪು ಬಣ್ಣಕ್ಕೆ ತಿರುಗಿರುವುದು ಇದೇ ಮೊದಲ ಬಾರಿಯೇನೂ ಅಲ್ಲವಂತೆ. ಈ ಹಿಂದೆ ಕೂಡ ನದಿಯ ಬಣ್ಣ ಬದಲಾಗಿತ್ತು ಎನ್ನಲಾಗ್ತಿದೆ. ಅಸಲಿಗೆ Norilsk ಪ್ರದೇಶದಲ್ಲಿ ಮಾಲಿನ್ಯ ಹೆಚ್ಚಾಗಿದೆ. ರಷ್ಯಾದ ಅತ್ಯಂತ ಕೆಟ್ಟ ಪ್ರದೇಶ ಅನ್ನೋ ಕುಖ್ಯಾತಿಗೂ Norilsk ಒಳಗಾಗಿದೆ. ಹಾಗಾಗಿ ಮಾಲಿನ್ಯದಿಂದ್ಲೇ ನದಿ ಕೆಂಪು ಬಣ್ಣಕ್ಕೆ ತಿರುಗಿರುವ ಸಾಧ್ಯತೆ ಹೆಚ್ಚು.