ಬಾಲಿವುಡ್ ನ ಶೆಹನ್ ಷಾ ಹಾಗೂ ಮಿಸ್ಟರ್ ಪರ್ಫೆಕ್ಷನಿಸ್ಟ್ ರನ್ನ ಒಟ್ಟಾಗಿ ತೆರೆ ಮೇಲೆ ನೋಡುವ ಚಾನ್ಸ್ ಅಭಿಮಾನಿಗಳಿಗೆ ಸಿಕ್ತಾ ಇದೆ.
ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿರೋ ಥಗ್ ಸಿನಿಮಾದಲ್ಲಿ ಇವರಿಬ್ರೂ ನಟಿಸಲಿದ್ದಾರಂತೆ. ಮೊದಲು ಥಗ್ ಹೀರೋ ಪಾತ್ರಕ್ಕಾಗಿ ಹೃತಿಕ್ ರೋಷನ್ ರನ್ನು ಕೇಳಲಾಗಿತ್ತು. ಆದ್ರೆ ಹೃತಿಕ್ ಈ ಆಫರ್ ನಿರಾಕರಿಸಿದ್ರು.
ಅಮಿತಾಭ್ ಕೂಡ ಥಗ್ ನಲ್ಲಿ ನಟಿಸಲು ಒಲ್ಲೆ ಎಂದಿದ್ದರು ಅನ್ನೋ ಸುದ್ದಿಯಿತ್ತು. ಇದೀಗ ಥಗ್ ನಲ್ಲಿ ನಟಿಸಲು ಅಮೀರ್ ಖಾನ್ ಒಪ್ಪಿಕೊಂಡಿದ್ದಾರೆ ಅನ್ನೋ ಸುದ್ದಿಯಿದೆ. ಅಮಿತಾಭ್ ಕೂಡ ಥಗ್ ನಲ್ಲಿ ಅಭಿನಯಿಸಲು ಸೈ ಎಂದಿದ್ದಾರೆ.
ಅಮೀರ್ ಖಾನ್ ಜೊತೆ ನಟಿಸುತ್ತಿರುವುದು ನಿಜಕ್ಕೂ ಗೌರವದ ಸಂಗತಿ ಎಂದಿರುವ ಅಮಿತಾಭ್ ಬಚ್ಚನ್, ಯಶ್ ರಾಜ್ ಬ್ಯಾನರ್ ನಲ್ಲಿ ಕೆಲಸ ಮಾಡಲು ಮತ್ತೊಂದು ಅವಕಾಶ ಸಿಕ್ಕಿದೆ ಅಂತಾ ಸಂತಸ ವ್ಯಕ್ತಪಡಿಸಿದ್ದಾರೆ. ಥಗ್ 2017ರ ವರ್ಷಾರಂಭದಲ್ಲಿ ಸೆಟ್ಟೇರಲಿದೆ.