ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಮತ್ತೇ ಚರ್ಚೆಗೆ ಕಾರಣವಾಗಿದೆ. ಮಲೇಶಿಯಾದ ಹಳ್ಳಿಯೊಂದರ ಮೇಲೆ ಬೃಹತ್ ಆಕಾರದ ಹಾರುವ ತಟ್ಟೆಯೊಂದು ಹಾದು ಹೋಗಿದ್ದು, ಮೊಬೈಲ್ ನಲ್ಲಿ ಸೆರೆ ಹಿಡಿದವರೊಬ್ಬರು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ.
ಈ ಬೃಹತ್ ಹಾರುವ ತಟ್ಟೆಯ ಕೆಳ ಭಾಗದಲ್ಲಿ ಪ್ರಜ್ವಲಿಸುವ ಬೆಳಕು ಕಾಣುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಈಗ ವೈರಲ್ ಆಗಿದೆ. ವಿಡಿಯೋ ಸತ್ಯಾಸತ್ಯತೆ ಕುರಿತು ಈಗ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ.