ನವದೆಹಲಿ: ಜಮೈಕಾ ಓಟಗಾರ ಉಸೇನ್ ಬೋಲ್ಟ್, ದನದ ಮಾಂಸ ತಿಂದ ಕಾರಣಕ್ಕೆ ಒಲಿಂಪಿಕ್ಸ್ ನಲ್ಲಿ ಹೆಚ್ಚಿನ ಚಿನ್ನದ ಪದಕ ಗೆಲ್ಲಲು ಕಾರಣವಾಯ್ತು ಎಂದು ದೆಹಲಿ ಬಿ.ಜೆ.ಪಿ. ಸಂಸದ ಉದೀತ್ ರಾಜ್ ಹೇಳಿದ್ದರು.
ಅವರ ಹೇಳಿಕೆಯ ಬಗ್ಗೆ ತಿರುಗೇಟು ನೀಡಿರುವ ಯೋಗಗುರು ಬಾಬಾ ರಾಮ್ ದೇವ್ ಅವರು, ಗೋವಿನ ತುಪ್ಪ ತಿಂದರೆ ಚಾಂಪಿಯನ್ ಆಗಬಹುದಾಗಿದೆ ಹೊರತು, ದನದ ಮಾಂಸದಿಂದಲ್ಲ ಎಂದು ಹೇಳಿದ್ದಾರೆ. ಉಸೇನ್ ಬೋಲ್ಟ್ ಗೆ ದನದ ಮಾಂಸ ತಿನ್ನುವಂತೆ ಆತನ ಕೋಚ್ ಸಲಹೆ ನೀಡಿದ್ದರು. ಅವರ ಸಲಹೆಯಂತೆ ದನದ ಮಾಂಸ ತಿಂದ ಉಸೇನ್ ಬೋಲ್ಟ್, ಒಲಿಂಪಿಕ್ಸ್ ನಲ್ಲಿ ಹೆಚ್ಚಿನ ಚಿನ್ನದ ಪದಕ ಗಳಿಸಿದ್ದರು. ನಮಗೆ ಹೆಚ್ಚಿನ ಚಿನ್ನದ ಪದಕ ಬೇಕು. ಇದಕ್ಕಾಗಿ ಕ್ರೀಡಾಪಟುಗಳು ದನದ ಮಾಂಸ ತಿನ್ನಲು ಅಡ್ಡಿಯೇನಿಲ್ಲ ಎಂದು ಉದೀತ್ ರಾಜ್ ಹೇಳಿದ್ದು, ವಿವಾದಕ್ಕೆ ಕಾರಣವಾಗಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಬಾ ರಾಮ್ ದೇವ್ ಅವರು, ದನದ ಮಾಂಸ ತಿನ್ನುವುದರಿಂದ ಚಾಂಪಿಯನ್ ಆಗಲ್ಲ, ಗೋವಿನ ತುಪ್ಪವನ್ನು ತಿನ್ನುವುದರಿಂದ ಚಾಂಪಿಯನ್ ಆಗಬಹುದು ಎಂದು ಹೇಳಿದ್ದಾರೆ.