ಅಮೇರಿಕದ ಹಾಸ್ಯ ನಟ ಜೀನಿ ವೈಲ್ಡರ್ ರವಿವಾರದಂದು ಕೊನೆಯುಸಿರೆಳೆದಿದ್ದಾರೆ. ಹಾಸ್ಯ ಕಲಾವಿದರಾಗಿದ್ದ ಇವರಿಗೆ 83 ವರ್ಷ ವಯಸ್ಸಾಗಿತ್ತು.
‘ಲಿ ವೋಂಕಾ ಎಂಡ್ ದ ಚಾಕಲೇಟ್ ಫ್ಯಾಕ್ಟರಿ’ ಚಿತ್ರದ ಅಭಿನಯದಿಂದ ಪ್ರಖ್ಯಾತರಾಗಿದ್ದ ವೈಲ್ಡರ್ ‘ದ ಪ್ರೊಡ್ಯೂಸರ್’, ‘ಬ್ಲೆಜಿಂಗ್ ಸ್ಯಾಡಲ್’ ಮತ್ತು ‘ಫ್ಯಾಂಕೀಸ್ಟೀನ್’ ನಲ್ಲಿ ಕೂಡ ಕೆಲಸಮಾಡಿದ್ದರು. ಉತ್ತಮ ಅಭಿನಯಕ್ಕಾಗಿ ಇವರು ಎರಡು ಬಾರಿ ಆಸ್ಕರ್ ಗೂ ನಾಮಾಂಕಿತರಾಗಿದ್ದರು.
ಖ್ಯಾತ ಹಾಸ್ಯ ನಟ ವೈಲ್ಡರ್ ಅವರು 11 ಜೂನ್ 1933 ರಲ್ಲಿ ಜನಿಸಿದ್ದರು. ತೆರೆಯ ಮೇಲೆ ಹಾಸ್ಯನಟರಾದ ಇವರು ನಿಜಜೀವನದಲ್ಲೂ ಕಠೋರ ಮಾತುಗಳನ್ನಾಡುತ್ತಿರಲಿಲ್ಲ. ಅಂತಹ ಮಾತುಗಳನ್ನಾಡಿದರೆ ಅಮ್ಮನಿಗೆ ನೋವಾಗುತ್ತದೆ ಎಂಬುದು ಅವರ ಭಾವನೆಯಾಗಿತ್ತು.