ಮುಂಬೈ- ಪುಣೆ ಹೆದ್ದಾರಿಯಲ್ಲಿ ನಡೆಯುವ ಅಪಘಾತಗಳನ್ನು ತಪ್ಪಿಸಲು ಮಹಾರಾಷ್ಟ್ರ ಸರ್ಕಾರ ಹೊಸ ಯೋಜನೆ ರೂಪಿಸಿದೆ.
ಹೆದ್ದಾರಿಗಳಲ್ಲಿ ನಡೆಯುವ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಮೊಟ್ಟಮೊದಲ ಬಾರಿಗೆ ಡ್ರೋನ್ ಅನ್ನು ಕಣ್ಗಾವಲಾಗಿ ಇರಿಸಲಿದೆ. ಮುಂಬೈ- ಪುಣೆ ಮಾರ್ಗದ 95 ಕಿ.ಮೀ. ದೂರವನ್ನು ಅಪಘಾತ ವಲಯ ಎಂದು ಗುರುತಿಸಲಾಗಿದ್ದು ಅಂತಹ ಸ್ಥಳದಲ್ಲಿ ಡ್ರೋನ್ ಗಳು ಕಾರ್ಯ ನಿರ್ವಹಿಸಲಿವೆ.
ಈ ಡ್ರೋನ್ ವೇಗದ ಚಾಲನೆ, ಲೇನ್ ತಪ್ಪಿ ಹೋಗುವುದು, ಓವರ್ ಟೇಕ್ ಮಾಡುವುದು ಮುಂತಾದವನ್ನು ಗಮನಿಸಲಿದೆ. ಸಿಸಿ ಟಿವಿ ಕ್ಯಾಮರಾಗಳಿಗಿಂತ ಡ್ರೋನ್ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಸಚಿವ ದೀಪಕ್ ವಸಂತ್ ಕೇಸರ್ಕರ್ ಹೇಳಿದ್ದಾರೆ.