ಮಂಗಳೂರು: ಪ್ರಕೃತಿಯಲ್ಲಿ ಕೆಲವೊಮ್ಮೆ ನಂಬಲಸಾಧ್ಯ ಸಂಗತಿಗಳು ನಡೆಯುತ್ತವೆ. ಅಂತಹ ಪ್ರಕರಣವೊಂದರ ವರದಿ ಇಲ್ಲಿದೆ ನೋಡಿ. ಮಂಗಳೂರಿನ ಬಾವಿಯೊಂದರಲ್ಲಿ ಬಿಸಿನೀರು ಕಂಡು ಬಂದ ಘಟನೆ ವರದಿಯಾಗಿದೆ.
ಸಾಮಾನ್ಯವಾಗಿ ಬಿಸಿ ನೀರಿನ ಬುಗ್ಗೆಗಳ ಬಗ್ಗೆ ಕೇಳಿರುತ್ತೇವೆ. ಇರುವ ಬಾವಿಯ ನೀರೇ ಬಿಸಿಯಾದರೆ ಹೇಗಿರಬೇಡ. ಇಂತಹ ಬಿಸಿ ನೀರಿನ ಬಾವಿ ನೋಡಲು ಜನ ಆಶ್ಚರ್ಯದಿಂದ ಮುಗಿಬಿದ್ದಿದ್ದಾರೆ. ಮಂಗಳೂರಿನ ಹೊರವಲಯದಲ್ಲಿರುವ ಪೊಳಲಿಯಲ್ಲಿ ಮನೆಯೊಂದರ ಎದುರು ಭಾಗದಲ್ಲಿ ಬಾವಿ ಇದ್ದು, ಈ ಬಾವಿಯ ನೀರನ್ನು ಸಮೀಪದ ದೇವಾಲಯದ ಪೂಜೆಗೆ ಬಳಸಲಾಗುತ್ತದೆ. ವ್ಯಕ್ತಿಯೊಬ್ಬರು ಎಂದಿನಂತೆ ನೀರು ಸೇದಿ ಕೈಯಲ್ಲಿ ಕೊಡ ಮುಟ್ಟಿದಾಗ ಅದು ಬಿಸಿಯಾಗಿದೆ.
ಅವರು ಹೀಗೆ 2-3 ಸಲ ಬಾವಿಯಿಂದ ನೀರು ಸೇದಿದಾಗಲೂ ನೀರು ಬಿಸಿಯಾಗಿರುವುದು ಕಂಡು ಬಂದಿದೆ. ಇದು ಅಲ್ಲಿನ ಜನರಿಗೆ ತಿಳಿದು, ಬಾಯಿಂದ ಬಾಯಿಗೆ ಹರಡಿದ್ದರಿಂದ ಹೆಚ್ಚಿನ ಜನ ಆಗಮಿಸಿ ಬಿಸಿನೀರಿನ ಬಾವಿಯನ್ನು ನೋಡಿದ್ದಾರೆ ಎಂದು ಹೇಳಲಾಗಿದೆ.