ಕೈರೋ: ಇತ್ತೀಚೆಗೆ ವಿಮಾನ ದುರಂತ ಪ್ರಕರಣ ಹೆಚ್ಚಾಗುತ್ತಿದ್ದು, ಈ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ. ಈಜಿಫ್ಟ್ ಏರ್ ವಿಮಾನ ನಾಪತ್ತೆಯಾಗಿದ್ದು, ಮೆಡಿರೇನಿಯನ್ ಸಮುದ್ರದಲ್ಲಿ ಪತನವಾಗಿದೆ. ಫ್ರಾನ್ಸ್ ಅಧ್ಯಕ್ಷ ಫ್ರಾಂಕೊಯಿಸ್ ಹೊಲಾಂಡೆ ಇದನ್ನು ಖಚಿತಪಡಿಸಿದ್ದಾರೆ.
ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಿಂದ ವಿಮಾನ ಈಜಿಪ್ಟ್ ನ ಕೈರೋಗೆ ಹೊರಟಿದ್ದು, ಮೆಡಿಟರೇನಿಯನ್ ಸಮುದ್ರದಲ್ಲಿ ಪತನವಾಗಿ ಸಿಬ್ಬಂದಿ ಸೇರಿದಂತೆ 66 ಮಂದಿ ಮೃತಪಟ್ಟಿದ್ದಾರೆ. ಮೆಡಿಟರೇನಿಯನ್ ಸಮುದ್ರ ಮೇಲೆ ಸುಮಾರು 37 ಸಾವಿರ ಅಡಿ ಎತ್ತರದಲ್ಲಿ ಹಾರಾಟದಲ್ಲಿದ್ದ ವಿಮಾನ ರೇಡಾರ್ ನಿಂದ ಸಂಪರ್ಕ ಕಡಿದುಕೊಂಡಿದ್ದು, ಅದೇ ಪ್ರದೇಶದಲ್ಲಿ ಪತನವಾಗಿರಬಹುದೆಂದು ಶಂಕಿಸಲಾಗಿದೆ. ಈ ವಿಮಾನದಲ್ಲಿ 56 ಪ್ರಯಾಣಿಕರು 10 ಮಂದಿ ಸಿಬ್ಬಂದಿ ಇದ್ದರು.
ವಿಮಾನವನ್ನು ಉಗ್ರರು ಹೊಡೆದುರುಳಿಸಿರಬಹುದು ಅಥವಾ ತಾಂತ್ರಿಕ ದೋಷದಿಂದ ಪತನವಾಗಿರಬಹುದೆಂದು ಹೇಳಲಾಗಿದ್ದು, ಶಂಕಿತ ಸ್ಥಳದಲ್ಲಿ ಸಮುದ್ರದಲ್ಲಿ ನಾಪತ್ತೆಯಾಗಿರುವ ವಿಮಾನದ ಅವಶೇಷಗಳಿಗಾಗಿ ಹುಡುಕಾಟ ನಡೆಸಲಾಗಿದೆ.