ತಿರುವನಂತಪುರಂ: ದೇಶದ ಗಮನ ಸೆಳೆದಿದ್ದ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಒಂದಿಷ್ಟು ಸ್ಥಾನಗಳನ್ನು ಗಳಿಸುವ ನಿರೀಕ್ಷೆ ಇತ್ತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪ್ರಚಾರ ನಡೆಸಿದ್ದರು.
ಬಿಜೆಪಿ ನಾಯಕರು ನೀಡಿದ ಸೋಮಾಲಿಯಾ ಹೇಳಿಕೆಯಿಂದ ಬಿಜೆಪಿಗೆ ಹಿನ್ನಡೆಯಾಗಿರಬಹುದೆಂದು ಹೇಳಲಾಗಿದೆ. ಕ್ರಿಕೆಟಿಗ ಶ್ರೀಶಾಂತ್ ಕ್ಲೀನ್ ಬೌಲ್ಡ್ ಆಗಿದ್ದಾರೆ. ಪಕ್ಷದ ಮುಖಂಡ ರಾಜ ಗೋಪಾಲ್ ಅವರು ಗೆಲುವು ಸಾಧಿಸಿದ್ದಾರೆ. ಆ ಮೂಲಕ ಕೇರಳದಲ್ಲಿ ಬಿಜೆಪಿ ಖಾತೆಯನ್ನು ತೆರೆದಿದೆ. ಬಿಜೆಪಿ ವಿಧಾನಸಭೆ ಪ್ರವೇಶಿಸಲು ಅತಿಥಿಗಳ ಪಾಸ್ ಪಡೆಯಬೇಕು. ಆ ಪಕ್ಷಕ್ಕೆ ಒಂದೂ ಸೀಟ್ ಬರಲ್ಲ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು. ಆದರೆ, ಬಿಜೆಪಿಗೆ ಒಂದು ಸ್ಥಾನ ಸಿಗುವುದರೊಂದಿಗೆ ಖಾತೆ ತೆರೆದಂತಾಗಿದೆ.
ಮತ್ತೊಂದು ಪ್ರಮುಖ ಸಂಗತಿ ಎಂದರೆ, ಬಿಜೆಪಿಗಿಂತಲೂ ಜೆಡಿಎಸ್ ಹೆಚ್ಚಿನ ಸಾಧನೆ ಮಾಡಿದೆ. 5 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜೆಡಿಎಸ್ 3 ರಲ್ಲಿ ಜಯಗಳಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ಚಿತ್ತೂರು, ವಡಕ್ಕಾರ, ತಿರುವಲ್ಲಾಡ್ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ ಎಂದು ಹೇಳಲಾಗಿದೆ.