ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾಳೆ. ಅಮ್ಮನಾಗುವ ಸಂಭ್ರಮ ಆಕೆ ಮುಖದಲ್ಲಿ ಎದ್ದು ಕಾಣ್ತಿದೆ. ಡಿಸೆಂಬರ್ ನಲ್ಲಿ ಮಗುವಿಗೆ ಜನ್ಮ ನೀಡಲಿರುವ ಕರೀನಾ ಹೊಟ್ಟೆ ದೊಡ್ಡದಾಗ್ತಾ ಇದೆ. ಬೇಬಿ ಬಂಪ್ ನಲ್ಲಿ ಫೋಟೋಕ್ಕೆ ಫೋಸ್ ಕೊಟ್ಟಿದ್ದಾಳೆ ಬೆಡಗಿ.
ಬಾಂದ್ರಾ ಸ್ಟುಡಿಯೋವೊಂದರಿಂದ ಹೊರ ಬರ್ತಾ ಇದ್ದ ಕರೀನಾಳನ್ನು ಛಾಯಾಗ್ರಾಹಕರು ಕ್ಯಾಮರಾದಲ್ಲಿ ಸೆರೆ ಹಿಡಿದ್ದಾರೆ. ಈ ಹಿಂದೆ ಕರೀನಾ ಗರ್ಭಿಣಿ ಎನ್ನುವ ಬಗ್ಗೆ ಸಾಕಷ್ಟು ಸುದ್ದಿಗಳು ಹರಡಿದ್ದವು. ಅದಕ್ಕೆ ಸರಿಯಾಗಿಯೇ ಉತ್ತರ ನೀಡಿದ್ದಳು ಕರೀನಾ. ಹಾಗೆ ಸದ್ಯ ನಡೆದ ಸೈಫ್ ಅಲಿ ಖಾನ್ ಹುಟ್ಟುಹಬ್ಬದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅಭಿಮಾನಿಗಳಿಗೆ ಖುಷಿ ನೀಡಿದ್ದಳು ಬೇಬೋ.
ಗರ್ಭಿಣಿಯಾಗಿರುವ ಕರೀನಾ ಈಗಲೂ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾಳೆ. ‘ವೀರ್ ದಿ ವೆಡ್ಡಿಂಗ್’ ಚಿತ್ರದ ಶೂಟಿಂಗನ್ನು ಎಂಜಾಯ್ ಮಾಡ್ತಿರುವ ಕರೀನಾ, ಚಿತ್ರದಲ್ಲಿ ಬೇಬಿ ಬಂಪ್ ತೋರಿಸಲಿದ್ದಾಳಂತೆ. ಕೈನಲ್ಲಿರುವ ಒಂದು ಚಿತ್ರ ಸೆಪ್ಟೆಂಬರ್ ನಲ್ಲಿ ಪೂರ್ಣಗೊಳ್ಳಲಿದ್ದು, ನಂತ್ರ ವಿಶ್ರಾಂತಿ ಪಡೆಯಲಿದ್ದಾಳೆ ಬೆಡಗಿ.