ಮೂರು ಒಲಂಪಿಕ್ಸ್ ನಲ್ಲಿ ಮೂರು ಬಂಗಾರದ ಪದಕ ಗೆದ್ದಿರುವ ಮಿಂಚಿನ ಓಟಗಾರ ಉಸೇನ್ ಬೋಲ್ಟ್ ವಿಶ್ವ ದಾಖಲೆ ಮಾಡಿರೋದು ಎಲ್ಲರಿಗೂ ತಿಳಿದಿರುವ ವಿಚಾರ. ಚಂಗನೆ ಓಡುವ ಬೋಲ್ಟ್, ವೈಯಕ್ತಿಕ ಬದುಕು ತಿಳಿಯುವ ಕುತೂಹಲ ಅಭಿಮಾನಿಗಳಿಗಿದ್ದೇ ಇದೆ. ಅನೇಕ ವರ್ಷಗಳವರೆಗೆ ಗರ್ಲ್ ಫ್ರೆಂಡ್ ಗುಟ್ಟು ಬಿಟ್ಟು ಕೊಟ್ಟಿರದ ಬೋಲ್ಟ್ ಪ್ರೀತಿಯ ಗುಟ್ಟು ಹೊರಬಿದ್ದಿದೆ.
ಕಳೆದ ಎರಡು ವರ್ಷಗಳಿಂದ ಬೋಲ್ಟ್ ಹೃದಯ ಗೆದ್ದಿರುವ ಬೆಡಗಿ ಜಮೈಕಾದ ಕಾಸಿ ಬೆನೆಟ್. ತನ್ನ ಪ್ರಿಯತಮೆಯನ್ನು ಬೋಲ್ಟ್ ಫಸ್ಟ್ ಲೇಡಿ ಎಂದೇ ಕರೆಯುತ್ತಾನೆ. 26 ವರ್ಷದ ಕಾಸಿ ಜೊತೆ ಬೋಲ್ಟ್ ಈ ವರ್ಷಾರಂಭದಲ್ಲಿ ಪರಸ್ಪರ ಕಿಸ್ ಮಾಡಿ ಸುದ್ದಿಯಲ್ಲಿದ್ದರು. ಇನ್ಸ್ಟ್ರಾಗ್ರಾಮ್ ನಲ್ಲಿ ಕಾಸಿ ಹಾಗೂ ಬೋಲ್ಟ್ ಜೋಡಿಯನ್ನು ಪ್ರೆಸಿಡೆಂಟ್ ಅಂಡ್ ಫಸ್ಟ್ ಲೇಡಿ ಎಂದು ಕರೆಯಲಾಗುತ್ತದೆ.
ಮೂರು ಬಾರಿ ಚಿನ್ನ ಗೆದ್ದಿರುವ ಬಾಯ್ ಫ್ರೆಂಡ್ ಬಗ್ಗೆ ಕಾಸಿ ಹೆಮ್ಮೆ ವ್ಯಕ್ತಪಡಿಸಿದ್ದಾಳೆ. ಸಂಭ್ರಮಾಚರಣೆಯ ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡಿದ್ದಾಳೆ. ಮೈ ಬೇಬಿ ಹಾಗೂ ಮೈ ಬಾಸ್ ಎಂದು ಬೋಲ್ಟ್ ನನ್ನು ಕರೆಯುತ್ತಾಳಂತೆ ಕಾಸಿ.