ಹೆಡ್ಡಿಂಗ್ ನೋಡಿ ಇದೇನು ಎಂದುಕೊಳ್ಳಬೇಡಿ. ಇದು ಅಕ್ಷಯ್ ಕುಮಾರ್ ಅವರ ಮುಂಬರುವ ಚಿತ್ರದ ಹೆಸರು. ದೇಶಭಕ್ತಿಗೆ ಸಂಬಂಧಿಸಿದ ಚಿತ್ರಗಳನ್ನು ಮಾಡಿ ಹೆಸರು ಗಳಿಸಿರುವ ಅಕ್ಷಯ್ ಕುಮಾರ್, ಈಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನದ ಕುರಿತು ಚಿತ್ರ ಮಾಡಲು ಹೊರಟಿದ್ದಾರೆ.
ನಿರ್ದೇಶಕ ನೀರಜ್ ಪಾಂಡೆ ಮತ್ತು ಅಕ್ಷಯ್ ಈ ಹೊಸ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಹಾಸ್ಯದ ಮೂಲಕ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಿದ್ದಾರೆ. ಚಿತ್ರದ ಸ್ಕ್ರಿಪ್ಟ್ ಈಗಾಗಲೇ ತಯಾರಾಗಿದೆ. ಚಿತ್ರೀಕರಣ ವರ್ಷದ ಅಂತ್ಯದಲ್ಲಿ ಆರಂಭಗೊಳ್ಳುತ್ತದೆ.
ಅನೇಕ ಚಿತ್ರದಲ್ಲಿ ಹಾಸ್ಯದ ನಟನೆಯಲ್ಲಿ ಈಗಾಗಲೇ ಅಕ್ಷಯ್ ಕುಮಾರ್ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇನ್ನು ‘ಟಾಯ್ಲೆಟ್’ ಮೂಲಕ ಹೇಗೆ ಹಾಸ್ಯ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.