ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬ ನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಆಸ್ಪತ್ರೆಯಿಂದ ಪರಾರಿಯಾಗಿ ಚಲಿಸುವ ರೈಲಿನ ಮುಂದೆ ಹಾರಿದ್ದು ಇದರಿಂದಾಗಿ ಎರಡೂ ಕಾಲುಗಳನ್ನು ಕಳೆದುಕೊಂಡು ಮತ್ತೆ ಅದೇ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಇಂತಹದೊಂದು ವಿಲಕ್ಷಣ ಘಟನೆ ಪಶ್ಚಿಮ ಬಂಗಾಳದ ಹೌರಾದಲ್ಲಿ ನಡೆದಿದ್ದು, ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ನಿರಂಜನ ರಾಯ್ ಎಂಬಾತ ಅಸಾಧ್ಯ ನೋವಿನಿಂದ ನರಳುತ್ತಿದ್ದ.
ತನ್ನ ಅನಾರೋಗ್ಯದ ಕಾರಣಕ್ಕೆ ಖಿನ್ನತೆಯಿಂದಲೂ ಬಳಲುತ್ತಿದ್ದ ನಿರಂಜನ ರಾಯ್, ಶನಿವಾರದಂದು ಆಸ್ಪತ್ರೆಯಿಂದ ಪರಾರಿಯಾಗಿದ್ದು, ಕರಗ್ಪುರ್ ಗೆ ತೆರಳುತ್ತಿದ್ದ ಲೋಕಲ್ ರೈಲಿನ ಮುಂದೆ ಹಾರಿದ್ದಾನೆ. ಇದರಿಂದಾಗಿ ಆತನ ಎರಡೂ ಕಾಲುಗಳು ತುಂಡಾಗಿದ್ದು, ಮತ್ತೆ ಅದೇ ಆಸ್ಪತ್ರೆಗೆ ದಾಖಲಿಸಿ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.