ಏನಾದರೂ ಹೊಸತನ್ನು ಸಾಧಿಸಿ ದಾಖಲೆ ನಿರ್ಮಿಸುವುದರಲ್ಲಿ ಚೀನಾ ಜನರದ್ದು ಎತ್ತಿದ ಕೈ. ಊಟ, ಆಟದಲ್ಲಿ ದಾಖಲೆ ನಿರ್ಮಿಸುತ್ತಿದ್ದ ಚೀನಾ ಈಗ ವಿನೂತನ ಶೈಲಿಯ ಮದುವೆ ಮಾಡಿ ದಾಖಲೆ ನಿರ್ಮಿಸಿದೆ.
ಚೀನಾದ ಶಿನಿಯೂಜಾಯ್ ಅಂತರರಾಷ್ಟ್ರೀಯ ಜಿಯಾಲಾಜಿಕಲ್ ಪಾರ್ಕ್ ಇಂತಹ ಒಂದು ಅಪರೂಪದ ಮದುವೆಗೆ ಸಾಕ್ಷಿಯಾಯಿತು. 180 ಮೀಟರ್ ಎತ್ತರದಲ್ಲಿ ತೇಲಾಡಿದ ಯುವಕ, ಯುವತಿ ಅಲ್ಲೇ ಹಾರ ಬದಲಾಯಿಸಿ ನವದಾಂಪತ್ಯಕ್ಕೆ ಕಾಲಿರಿಸಿದ್ದಾರೆ.
ಚೀನಾದಲ್ಲಿ ಆಗಸ್ಟ್ 9 ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಅಂದು ಜಗತ್ತಿನ ಅತೀ ಉದ್ದನೆಯ ಗ್ಲಾಸ್ ಬ್ರಿಡ್ಜ್ ಕೆಳಗೆ ನೇತಾಡುತ್ತ ಇವರು ಮದುವೆಯಾಗಿದ್ದಾರೆ. ಪ್ರೇಮಿಗಳ ದಿನದಂದೇ ಈ ಜೋಡಿ ಒಂದಾಗಿರುವುದು ಇನ್ನೊಂದು ವಿಶೇಷ.