ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗಳ ನಡುವೆ ಕಲಹ ಆರಂಭವಾಗಿದ್ದು, ಆಕ್ರೋಶಗೊಂಡ ಪತಿ ಚಲಿಸುತ್ತಿರುವ ಬಸ್ ನಿಂದ ಹಾರಿ ಸಾವನ್ನಪ್ಪಿರುವ ಘಟನೆ ನಡೆದಿದೆ.
45 ವರ್ಷದ ಕರಿಯಪ್ಪ ಗದ್ರಟಗಿ ಎಂಬಾತ ತನ್ನ ಪತ್ನಿ ಜೊತೆ ಕಲಬುರ್ಗಿಯಿಂದ ಹಗರಿಬೊಮ್ಮನಹಳ್ಳಿಗೆ ಬಸ್ ನಲ್ಲಿ ತೆರಳುತ್ತಿದ್ದು, ದಾರಿಯುದ್ದಕ್ಕೂ ದಂಪತಿಗಳು ಜಗಳವಾಡುತ್ತಲೇ ಬಂದಿದ್ದಾರೆ.
ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಲಿಂಗಸಗೂರಿನ ಅಂಕುಶಗೊಡ್ಡಿ ಬಳಿ ದಂಪತಿಗಳ ಕಲಹ ತಾರಕಕ್ಕೇರಿದ್ದು, ಇದರಿಂದ ಆಕ್ರೋಶಗೊಂಡ ಕರಿಯಪ್ಪ, ಚಲಿಸುತ್ತಿದ್ದ ಬಸ್ ನಿಂದ ಕೆಳಗೆ ಹಾರಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡ ಆತ ಸಾವನ್ನಪ್ಪಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.