ರಿಯೋ ಡಿ ಜನೈರೋ: ವೇಗದ ಓಟಕ್ಕೆ ಮತ್ತೊಂದು ಹೆಸರೇ ಉಸೇನ್ ಬೋಲ್ಟ್. ಈಜುಗಾರ ಮೆಕೆಲ್ ಫೆಲ್ಪ್ಸ್ ಚಿನ್ನದ ಮೀನು ಎಂದೇ ಖ್ಯಾತರಾಗಿರುವಂತೆ ಉಸೇನ್ ಬೋಲ್ಟ್ ವೇಗದ ಓಟದಲ್ಲಿ ಶರವೇಗದ ಸರದಾರನಾಗಿದ್ದಾರೆ.
ರಿಯೋ ಡಿ ಜನೈರಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ ಜಮೈಕಾದ ಶರವೇಗದ ಸರದಾರ ಉಸೇನ್ ಬೋಲ್ಟ್ ಹೊಸ ಇತಿಹಾಸ ನಿರ್ಮಿಸಿ ಚಿನ್ನದ ಪದಕ ಗಳಿಸಿದ್ದಾರೆ. 100 ಮೀಟರ್ ಸ್ಟ್ರಿಂಟ್ ನಲ್ಲಿ ನಿಗದಿತ ಗುರಿಯನ್ನು ಕೇವಲ 9.81 ಸೆಕೆಂಡ್ ನಲ್ಲಿ ತಲುಪುವ ಮೂಲಕ ಉಸೇನ್ ಬೋಲ್ಟ್ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಸತತ 3ನೇ ಒಲಿಂಪಿಕ್ಸ್ ನಲ್ಲಿ ಚಿನ್ನ ಪಡೆದ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದು, ರಿಯೋದಲ್ಲಿ ಮಿಂಚು ಹರಿಸಿದ್ದಾರೆ.
ಬೀಜಿಂಗ್ ಮತ್ತು ಲಂಡನ್ ಒಲಿಂಪಿಕ್ಸ್ ನಲ್ಲಿ ಉಸೇನ್ ಬೋಲ್ಟ್ ಚಿನ್ನದ ಪದಕ ಗಳಿಸಿದ್ದರು. ಅಮೆರಿಕದ 34ರ ಹರೆಯದ ಈ ಕ್ರೀಡಾಪಟು ಚಿರತೆ ವೇಗವನ್ನು ಹೊಂದಿದ್ದು, ನಿರೀಕ್ಷೆಯಂತೆಯೇ ಒಲಿಂಪಿಕ್ಸ್ ನಲ್ಲಿ ಚಿನ್ನ ಗಳಿಸಿದ್ದಾರೆ.