ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಂಚಿಯ ಪರ್ವತದ ಮೇಲೆ ದೇಶದ ತ್ರಿವರ್ಣ ಧ್ವಜ ಹಾರಿಸಲು ಸಕಲ ಸಿದ್ಧತೆ ನಡೆದಿದೆ.
ಈ ಮೂಲಕ ದೇಶದ ರಾಷ್ಟ್ರಧ್ವಜ ರಾಂಚಿಯಲ್ಲಿ ಅತಿ ಎತ್ತರದಲ್ಲಿ ಹಾರಲಿದೆ. ಈ ಧ್ವಜಾರೋಹಣದಲ್ಲಿ ಸುಮಾರು 3,100 ಜನರು ಪಾಲ್ಗೊಳ್ಳಲಿದ್ದಾರೆ.
ರಾಂಚಿಯಲ್ಲಿ ಹಾರಲಿರುವ ಈ ಧ್ವಜ 99 ಅಡಿ ಅಗಲ, 66 ಅಡಿ ಉದ್ದವಿದ್ದು, ಈ ಧ್ವಜದ ಬೆಲೆ 1 ಲಕ್ಷದ 80 ಸಾವಿರ ರೂಪಾಯಿ. ತ್ರಿವರ್ಣ ಧ್ವಜವನ್ನು ನೆಲದಿಂದ 493 ಅಡಿ ಎತ್ತರವಿರುವ ಪರ್ವತದ ಮೇಲೆ 293 ಅಡಿ ಎತ್ತರದಲ್ಲಿ ಹಾರಿಸಲಾಗುತ್ತದೆ.