ನವದೆಹಲಿ: ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲೇ ಇರುವ ಚಿನ್ನದ ಧಾರಣೆ, 31,000 ರೂ. ಗಡಿ ದಾಟಿ ದಾಖಲೆ ನಿರ್ಮಿಸಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿನ್ನದ ಬೇಡಿಕೆ ಶೇ.12 ರಷ್ಟು ಕಡಿಮೆಯಾಗಲಿದೆ ಎನ್ನಲಾಗಿದೆ.
ಬೆಲೆಯಲ್ಲಿ ಭಾರೀ ಹೆಚ್ಚಳವಾದ ಕಾರಣ, ದೇಶದ ಚಿನ್ನದ ಬೇಡಿಕೆಯಲ್ಲಿ ಶೇ. 12ರಷ್ಟು ಕಡಿಮೆಯಾಗಲಿದೆ. ಇದು 750-850 ಟನ್ ಗಳಷ್ಟು ಆಗಬಹುದು ಎಂದು ವಿಶ್ವ ಚಿನ್ನ ಮಂಡಳಿ ಹೇಳಿದೆ. ದ್ವಿತೀಯ ತ್ರೈ ಮಾಸಿಕ ಅವಧಿಯಲ್ಲಿ ಚಿನ್ನದ ಬೆಲೆ ಏರಿಕೆ, ಕೇಂದ್ರ ಸರ್ಕಾರದ ತೆರಿಗೆ ನೀತಿ ವಿರೋಧಿಸಿ ವರ್ತಕರು ನಡೆಸಿದ ಮುಷ್ಕರ ಮೊದಲಾದ ಕಾರಣದಿಂದ ಬೇಡಿಕೆ ಕುಸಿತವಾಗಿ, ಶೇ.18ರಷ್ಟು ಕಡಿಮೆಯಾಗಿತ್ತು ಎಂದು ಹೇಳಲಾಗಿದೆ.
ಬೇಡಿಕೆ ಕುಸಿದಿರುವುದರಿಂದ ಚಿನ್ನ ಆಮದು ಪ್ರಮಾಣದಲ್ಲಿಯೂ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಹೆಚ್ಚು, ಕಡಿಮೆ ಆಗಬಹುದಾಗಿದೆ. ಬೆಲೆಯ ಆಧಾರದಲ್ಲಿ ಬೇಡಿಕೆಯೂ ನಿರ್ಧಾರವಾಗಲಿದೆ. ಸದ್ಯಕ್ಕೆ ಚಿನ್ನ ಆಮದು ಇಳಿಕೆಯಾಗಿದೆ ಎನ್ನಲಾಗಿದೆ.