ನವದೆಹಲಿ: ಬುಲಂದ್ ಶಹರ್ ನಲ್ಲಿ ನೋಯ್ಡಾ ಮೂಲದ ತಾಯಿ, ಅಪ್ರಾಪ್ತ ಮಗಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸಚಿವ ಅಜಂ ಖಾನ್ ವಿರುದ್ಧ ಎಫ್.ಐ.ಆರ್.ದಾಖಲಿಸಬೇಕೆಂದು ಹೇಳಲಾಗಿದೆ.
ಸಂತ್ರಸ್ಥ ಬಾಲಕಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿ, ಅಜಂ ಖಾನ್ ವಿರುದ್ಧ ಎಫ್.ಐ.ಆರ್. ದಾಖಲಿಸಬೇಕೆಂದು ಕೋರಿದ್ದಾಳೆ. ಬುಲಂದ್ ಶಹರ್ ಘಟನೆ ವಿರೋಧ ಪಕ್ಷಗಳು ನಡೆಸಿದ ರಾಜಕೀಯ ಪಿತೂರಿ ಎಂದು ಸಚಿವ ಅಜಂ ಖಾನ್ ಹೇಳಿದ್ದು, ಉತ್ತರಪ್ರದೇಶ ಸರ್ಕಾರದಿಂದ ನನಗೆ ನ್ಯಾಯ ಸಿಗುವ ಭರವಸೆ ಇಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾಳೆ. ಈ ಪ್ರಕರಣವನ್ನು ದೆಹಲಿಗೆ ವರ್ಗಾಯಿಸಿ, ನ್ಯಾಯಾಲಯ ನಿಗಾ ವಹಿಸಿ ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದಾಳೆ.
ಕಾರಿನಲ್ಲಿ ಹೋಗುತ್ತಿದ್ದ ನೋಯ್ಡಾ ಮೂಲದ ಕುಟುಂಬದವರನ್ನು ಬುಲಂದ್ ಶಹರ್ ನಲ್ಲಿ ಅಡ್ಡಗಟ್ಟಿದ್ದ ದುಷ್ಕರ್ಮಿಗಳು ತಾಯಿ ಮಗಳನ್ನು ಅಪಹರಿಸಿ, ಕುಟುಂಬದವರ ಎದುರಿನಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿದ್ದರು.