ಅನೈತಿಕ ಸಂಬಂಧಗಳಿಂದ ಏನೆಲ್ಲಾ ಅವಾಂತರಗಳಾಗುತ್ತವೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಹೀಗೆ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದೆ ಎಂದು ಭಾವಿಸಿ ತನ್ನ ಮಗುವನ್ನೇ ಮಹಿಳೆಯೊಬ್ಬಳು ಕೊಲೆ ಮಾಡಿದ್ದಾಳೆ.
ದಿಂಡಿಗಲ್ ನ ಪಳನಿಯ ಪುಷ್ಪತ್ತೂರಲ್ಲಿ ವಾಸವಾಗಿದ್ದ 33 ವರ್ಷದ ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ. ಗಂಡನೊಂದಿಗೆ ಅನ್ಯೋನ್ಯವಾಗಿಯೇ ಇದ್ದ ಆಕೆ ಇತ್ತೀಚೆಗೆ ಅಂಗಮುತ್ತು ಎಂಬುವವನೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದಳು. ಅಂಗಮುತ್ತು ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಈ ಸಂದರ್ಭದಲ್ಲಿ ಮನೆಯಲ್ಲಿದ್ದ 5 ವರ್ಷದ ಮಗ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂದು ಭಾವಿಸಿ ಥಳಿಸಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಪ್ರಿಯಕರನ ಜೊತೆಗಿದ್ದ ಸಂದರ್ಭದಲ್ಲಿ ಮಗ ಅಳುತ್ತಿದ್ದ. ಆಗ ಮಗನಿಗೆ ಸರಿಯಾಗಿ ಹೊಡೆದೆ. ಅಂಗಮುತ್ತು ಕೂಡ ಹೊಡೆದ ಕಾರಣ ಮಗ ಮೃತಪಟ್ಟಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.