ಚೆನ್ನೈ: ರಷ್ಯಾದ ಸಹಯೋಗದೊಂದಿಗೆ ಕೂಡಂಕುಳಂನಲ್ಲಿ ಸ್ಥಾಪನೆಗೊಂಡ ಅಣು ವಿದ್ಯುತ್ ಸ್ಥಾವರದ ಮೊದಲ ಘಟಕ ಲೋಕಾರ್ಪಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ಬುಧವಾರ ಈ ಅಣುಸ್ಥಾವರವನ್ನು ಉದ್ಘಾಟಿಸಿದರು.
ಈ ಘಟಕದ ಲೋಕಾರ್ಪಣೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದಿದೆ. ನವದೆಹಲಿಯಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಕೇಂದ್ರ ಸಚಿವ ರಾಧಾಕೃಷ್ಣನ್ ಅವರು ಮೋದಿ ಅವರ ಜೊತೆಗಿದ್ದರು. ಇನ್ನು ಪುಟಿನ್ ಅವರು ಮಾಸ್ಕೋದ ಕಚೇರಿಯಲ್ಲಿದ್ದರೆ, ಜಯಲಲಿತಾ ಚೆನ್ನೈನಲ್ಲಿದ್ದರು.
2014 ರಿಂದ ಕಾರ್ಯನಿರತವಾಗಿರುವ ಈ ಸ್ಥಾವರದಲ್ಲಿ 1000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದ್ದು, ಇದರಲ್ಲಿ ಅರ್ಧ ತಮಿಳುನಾಡಿನ ಪಾಲಾಗುತ್ತದೆ.