ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 5 ಕೋಟಿ ರೂ. ಗಳಿಗೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡಿದ್ದ ವಿಠ್ಠಲ್ ಮಲ್ಯ ರಸ್ತೆಯ ಜೆಡಬ್ಲೂ ಮಾರಿಯಟ್ ಹೋಟೆಲ್ ಗೆ ಬಿಬಿಎಂಪಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಇಂದು ಬೆಳಿಗ್ಗೆ ಹೋಟೆಲ್ ಮೇಲೆ ದಾಳಿ ನಡೆಸಿದ ಬಿಬಿಎಂಪಿ ಅಧಿಕಾರಿಗಳು, ಬಾಕಿ ಉಳಿಸಿಕೊಂಡಿರುವ 5.59 ಕೋಟಿ ರೂ. ತೆರಿಗೆ ಪಾವತಿಸದಿದ್ದರೆ ಹೋಟೆಲ್ ಜಫ್ತಿ ಮಾಡುವುದಾಗಿ ಹೇಳಿದ್ದರು. ಸದ್ಯಕ್ಕೆ 1.49 ಕೋಟಿ ರೂ. ತೆರಿಗೆ ಕಟ್ಟುವುದಾಗಿ ಹೋಟೆಲ್ ಆಡಳಿತ ಮಂಡಳಿ ತಿಳಿಸಿದ್ದು, ಇದಕ್ಕೆ ಪಾಲಿಕೆ ಅಧಿಕಾರಿಗಳು ಸೊಪ್ಪು ಹಾಕಲಿಲ್ಲ.
ಅಂತಿಮವಾಗಿ ಹೋಟೆಲ್ ನ ಸೋಫಾ ಸೆಟ್, ಕುರ್ಚಿಗಳನ್ನು ಜಫ್ತಿ ಮಾಡಿದ ಮಹಾನಗರ ಪಾಲಿಕೆ ಸಿಬ್ಬಂದಿ, ಶೀಘ್ರದಲ್ಲೇ ತೆರಿಗೆ ಪಾವತಿಸದಿದ್ದರೆ ಹೋಟೆಲ್ ಜಫ್ತಿ ಮಾಡುವುದಾಗಿ ಎಚ್ಚರಿಸಿದ್ದಾರೆ. ಇದರಿಂದ ಎಚ್ಚೆತ್ತುಕೊಂಡು ಹೋಟೆಲ್ ಆಡಳಿತ ಮಂಡಳಿ ತೆರಿಗೆ ಪಾವತಿಗೆ ಮುಂದಾಗಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಹಲವು ಬಾರಿ ನೋಟೀಸ್ ನೀಡಿದ್ದರೂ ಹೋಟೆಲ್ ನವರು ತೆರಿಗೆ ಪಾವತಿಸಲು ನಿರ್ಲಕ್ಷ್ಯ ವಹಿಸಿದ್ದರೆನ್ನಲಾಗಿದೆ.