ಬೆಂಗಳೂರು: ವಾಹನಗಳ ಚಾಲನೆ ಮಾಡುವಾಗ ಎಷ್ಟೇ ಜಾಗರೂಕತೆ ವಹಿಸಿದರೂ, ಕೆಲವೊಮ್ಮೆ ಅವಘಢ ಸಂಭವಿಸುತ್ತವೆ. ಹೀಗೆ ಚಾಲನೆಯಲ್ಲಿದ್ದ ವಾಹನವೊಂದಕ್ಕೆ ಏಕಾಏಕಿ ಬೆಂಕಿ ತಗುಲಿದ ಘಟನೆ ನಡೆದಿದೆ.
ಚಾಲನೆಯಲ್ಲಿದ್ದ ಮಾರುತಿ ಓಮ್ನಿಗೆ ಬೆಂಕಿ ಬಿದ್ದ ಘಟನೆ ಬೆಂಗಳೂರಿನ ಪೀಣ್ಯ 8ನೇ ಕ್ರಾಸ್ ಸ್ವಾತಿ ಪೆಟ್ರೋಲ್ ಬಂಕ್ ಸಮೀಪ ನಡೆದಿದೆ. ನಿನ್ನೆ ರಾತ್ರಿ ರಾಮಚಂದ್ರಪ್ಪ ಎಂಬುವವರಿಗೆ ಸೇರಿದ ಮಾರುತಿ ಓಮ್ನಿಯಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಸ್ವಾತಿ ಪೆಟ್ರೋಲ್ ಬಂಕ್ ಸಮೀಪ ವಾಹನ ಚಾಲನೆಯಲ್ಲಿದ್ದಾಗಲೇ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಇಡೀ ವಾಹನಕ್ಕೆ ವ್ಯಾಪಿಸಿದೆ. ಅದೃಷ್ಟವಶಾತ್ ಅದರಲ್ಲಿದ್ದ ಮೂವರೂ ಪಾರಾಗಿದ್ದಾರೆ.
ಓಮ್ನಿಗೆ ಬೆಂಕಿ ತಗುಲಿದ ಸುದ್ದಿ ತಿಳಿದ ಕೂಡಲೇ, ಅಗ್ನಿಶಾಮಕ ದಳ ಮತ್ತು ತುರ್ತು ಸೇವೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಈ ವೇಳೆಗಾಗಲೇ ಮಾರುತಿ ಓಮ್ನಿ ಸಂಪೂರ್ಣ ಸುಟ್ಟುಹೋಗಿದೆ ಎಂದು ಹೇಳಲಾಗಿದೆ.