ಬೆಂಗಳೂರು: ಖಾಸಗಿ ಕಂಪನಿಗಳ ತೀವ್ರ ಪೈಪೋಟಿಯ ನಡುವೆಯೂ ಚೇತರಿಸಿಕೊಂಡು ಕಳೆದ ವರ್ಷದಿಂದ ಲಾಭದತ್ತ ಮುಖ ಮಾಡಿರುವ ಬಿ.ಎಸ್.ಎನ್.ಎಲ್. ವತಿಯಿಂದ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಲಾಗಿದೆ.
ಬಿ.ಎಸ್.ಎನ್.ಎಲ್. ಬಂಪರ್ ಕೊಡುಗೆ ನೀಡಿದ್ದು, ಸಾರ್ವಜನಿಕ ವಲಯದ ಎಲ್ಲಾ ಬಿ.ಎಸ್.ಎನ್.ಎಲ್. ಸ್ಥಿರ ದೂರವಾಣಿಗಳಿಂದ ಯಾವುದೇ ನೆಟ್ ವರ್ಕ್ ಇರುವ ಮೊಬೈಲ್ ಅಧವಾ ಸ್ಥಿರ ದೂರವಾಣಿಗಳಿಗೆ ಉಚಿತವಾಗಿ ಕರೆ ಮಾಡಬಹುದಾಗಿದೆ. ಬಿ.ಎಸ್.ಎನ್.ಎಲ್. ಗ್ರಾಹಕರಿಗೆ ಈ ವಿಶೇಷ ಆಫರ್ ಆಗಸ್ಟ್ 15 ರಿಂದ ಎಲ್ಲಾ ಭಾನುವಾರದ ದಿನಗಳಂದು ಲಭ್ಯವಾಗುತ್ತದೆ ಎಂದು ಭಾರತ್ ಸಂಚಾರ್ ನಿಗಮದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಸ್ತುತ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ಸ್ಥಿರ ದೂರವಾಣಿಯಿಂದ ಯಾವುದೇ ನೆಟ್ ವರ್ಕ್ ಗಳಿಗೆ ಉಚಿತವಾಗಿ ಕರೆ ಮಾಡುವ ಸೌಲಭ್ಯ ನೀಡಲಾಗುತ್ತಿದ್ದು, ಇದರೊಂದಿಗೆ ಹೊಸ ಆಫರ್ ನೀಡಲಾಗಿದೆ ಎಂದು ಹೇಳಲಾಗಿದೆ.