ಭಾರತ ಕ್ರಿಕೆಟ್ ತಂಡ ಸದ್ಯ ವೆಸ್ಟ್ ಇಂಡೀಸ್ ನಲ್ಲಿದೆ. ಭಾರತ -ವೆಸ್ಟ್ ಇಂಡೀಸ್ ನಡುವೆ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಗಂಡನನ್ನು ಬೆಂಬಲಿಸಲು ಕ್ರಿಕೆಟ್ ಆಟಗಾರರ ಪತ್ನಿಯರು ವೆಸ್ಟ್ ಇಂಡೀಸ್ ತಲುಪಿದ್ದಾರೆ. ಇದ್ರಲ್ಲಿ ಅಜಿಂಕ್ಯಾ ರಹಾನೆ ಪತ್ನಿ ರಾಧಿಕಾ ರಹಾನೆ ಕೂಡ ಒಬ್ಬರು.
ಸದ್ಯ ರಾಧಿಕಾ ವೆಸ್ಟ್ ಇಂಡೀಸ್ ನಲ್ಲಿದ್ದಾರೆ. ಎರಡನೇ ಟೆಸ್ಟ್ ಪಂದ್ಯ ಮುಗಿದ ನಂತ್ರ ರಾಧಿಕಾ ವೆಸ್ಟ್ ಇಂಡೀಸ್ ಗೆ ಪ್ರಯಾಣ ಬೆಳೆಸಿದ್ದಾರೆ. ಮೂರನೇ ಟೆಸ್ಟ್ ಆರಂಭಕ್ಕೂ ಮುನ್ನ ಸಿಕ್ಕ ಬಿಡುವಿನ ಸಮಯದಲ್ಲಿ ಅಜಿಂಕ್ಯಾ ರಾಧಿಕಾ ಜೊತೆ ಸಮಯ ಕಳೆದಿದ್ದಾರೆ.
ಬೀಚ್ ಸುತ್ತಿ, ಭರ್ಜರಿ ಶಾಪಿಂಗ್ ಮಾಡಿದ್ದಾರೆ ಅಜಿಂಕ್ಯಾ ಜೋಡಿ. ಇಬ್ಬರೂ ಆ ಮಧುರ ಕ್ಷಣದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.