ವಿಶ್ವದ ಜನರು ಚಿತ್ರ ವಿಚಿತ್ರ ಕೆಲಸಗಳನ್ನು ಮಾಡಿ ವಿಶ್ವ ದಾಖಲೆ ಸೇರ್ತಿದ್ದಾರೆ. ಇದಕ್ಕೆ ಭಾರತೀಯರೇನೂ ಕಡಿಮೆ ಇಲ್ಲ. ಇದಕ್ಕೆ ಉತ್ತಮ ಉದಾಹರಣೆ ಬೆಂಗಳೂರಿನ ನಿವಾಸಿ ಅನುರಾಧಾ ಈಶ್ವರ್. ವಿನಯ್ ಫ್ಯಾಷನ್ ನ ಮಾಲೀಕರಾದ ಅನುರಾಧಾ ಈಶ್ವರ್ ಈಗ ಗಿನ್ನೆಸ್ ಬುಕ್ ಸೇರಿದ್ದಾರೆ.
ಅನುರಾಧ ಏನಾದ್ರೂ ಹೊಸದು ಮಾಡಬೇಕೆಂದು ಯೋಚಿಸುತ್ತಿದ್ದರಂತೆ. ಆಗ ಅವರ ಮಗ ವಿನಯ್ ಅತಿ ದೊಡ್ಡ ಬ್ಲೌಸ್ ತಯಾರಿಸುವಂತೆ ಸಲಹೆ ನೀಡಿದ್ರಂತೆ. ಎಂಜಿನಿಯರ್ ಆಗಿರುವ ವಿನಯ್ ಈಗಾಗಲೇ ಅನೇಕ ಸಾಧನೆ ಮಾಡಿ ದಾಖಲೆ ಪುಸ್ತಕ ಸೇರಿದ್ದಾರೆ.
ಮಗನ ಮಾತನ್ನು ಗಮನದಲ್ಲಿಟ್ಟುಕೊಂಡು ಅನುರಾಧ ಅತಿ ದೊಡ್ಡ ಬ್ಲೌಸ್ ತಯಾರಿಸಿದ್ದಾರೆ. 30 ಅಡಿ ಎತ್ತರ ಹಾಗೂ 44 ಅಡಿ ಅಗಲದ ಬ್ಲೌಸ್ ಸಿದ್ಧಪಡಿಸಿದ್ದಾರೆ. ಎರಡು ವರ್ಷಗಳ ಹಿಂದೆ ಈ ಬ್ಲೌಸ್ ಸಿದ್ಧವಾಗಿತ್ತು. ಆದ್ರೆ ಈಗ ಗಿನ್ನೆಸ್ ರೆಕಾರ್ಡ್ ಸೇರಿದೆ. ಇದನ್ನು ತಯಾರಿಸುವುದು ಸುಲಭದ ಕೆಲಸವಾಗಿರಲಿಲ್ಲ. 72 ಗಂಟೆಗಳ ಕಾಲ ಐದು ಮಂದಿ ಕೆಲಸ ಮಾಡಿದ್ದಾರೆ. ಬಿಗ್ ಕಟೋರಿ ಬ್ಲೌಸ್ ಗೆ 280 ಮೀಟರ್ ಪ್ರಿಂಟೆಂಡ್ ಕಾಟನ್ ಹಾಗೂ 20 ಮೀಟರ್ ಆರೆಂಜ್ ಪಾಲಿಯೆಸ್ಟರ್ ಬಳಸಲಾಗಿದೆ.