ಪ್ರೇಮಿಗಳು ಒಂದಾಗಿ ಬದುಕ್ತಾರೆ ಒಂದಾಗಿ ಸಾಯ್ತಾರೆ ಎಂಬ ಮಾತಿದೆ. ಆದ್ರೆ ಇತ್ತೀಚೆಗೆ ಪ್ರೇಮಿಗಳು ಹೇಗಾಗ್ತಿದ್ದಾರೆಂಬುದಕ್ಕೆ ಒಂದು ವಿಡಿಯೋ ಸಾಕ್ಷಿಯಾಗಿದೆ.
ನದಿಯಲ್ಲಿ ಹುಡುಗಿಯೊಬ್ಬಳು ಈಜಲು ಮುಂದಾಗ್ತಾಳೆ. ಆಗ ಆಕೆ ಎಡವಿ ಬಿಡ್ತಾಳೆ. ಪಕ್ಕದಲ್ಲಿಯೇ ಕುಳಿತಿದ್ದ ಬಾಯ್ ಫ್ರೆಂಡ್ ಕಾಲನ್ನು ಹಿಡಿದು ಸಂಭಾಳಿಸಿಕೊಳ್ಳಲು ಪ್ರಯತ್ನಿಸ್ತಾಳೆ. ಆದ್ರೆ ಬಾಯ್ ಫ್ರೆಂಡ್ ಆಕೆಯ ರಕ್ಷಣೆಗೆ ಮುಂದಾಗುವುದಿಲ್ಲ. ಬದಲಾಗಿ ತಾನು ತಪ್ಪಿಸಿಕೊಳ್ಳಲು ನೋಡಿದ್ದಾನೆ.